ಮೈಸೂರು,ಆಗಸ್ಟ್,25,2021(www.justkannada.in): ವಿದ್ಯುತ್ ನಿಗಮಗಳ ಖಾಸಗೀಕರಣ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ಚೆಸ್ಕಾಂ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಹಾಗೂ ಚೆಸ್ಕಾಂ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ಸಚಿವ ಸುನೀಲ್ ಕುಮಾರ್, ವಿದ್ಯುತ್ ನಿಗಮ ಗಳ ಖಾಸಗೀಕರಣ ವಿಚಾರ ಸರ್ಕಾರದ ಮುಂದೆ ಇಲ್ಲ. ಕೇಂದ್ರದ ಬಿಲ್ ಬಗ್ಗೆ ನನಗೆ ಮಾಹಿತಿ ಇಲ್ಲ. ವಿದ್ಯುತ್ ದರ ಏರಿಕೆ ಕೂಡ ಸರ್ಕಾರದ ಕೈಯಲ್ಲಿ ಇಲ್ಲ. ಇದು ವಿದ್ಯುತ್ ಸರಬರಾಜು ಮಾಡುವವರ ತೀರ್ಮಾನ. ಇದರ ಬಗ್ಗೆ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುವುದಿಲ್ಲ. ವಿದ್ಯುತ್ ಕಂಪನಿಗಳ ಖಾಸಗೀಕರಣ ಇಲ್ಲ ಎಂದರು.
ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ನಾನು ಸರ್ಕಾರದ ಸಚಿವನಾಗಿದ್ದೇನೆ. ನಮ್ಮ ಸರ್ಕಾರದ ಜವಾಬ್ದಾರಿ ಇರುವುದು ಕೊರೊನಾ ನಿಯಂತ್ರಣ ಮಾಡುವುದು. ಕಾನೂನು ಮಾಡುವುದು ದೊಡ್ಡದಲ್ಲ ಜನ ಸಹಕಾರ ಕೊಡಬೇಕು. ಜನ ಸಹಕಾರ ಕೊಟ್ಟರೆ ಕೊರೊನಾ ನಿಯಂತ್ರಣ ಮಾಡಬಹುದು. ಹಾಗಂತ ಗಣೇಶೋತ್ಸವ ಅದ್ದೂರಿಯಾಗಿ ನಡೆಯಬಾರದ..? ಎಂದಲ್ಲ. ವೈಭವಿಕಾರಣ ಎಲ್ಲ ಇರಬೇಕು. ಆದ್ರೆ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಅದನ್ನು ಸಂಘ ಸಂಸ್ಥೆಗಳು ಧಾರ್ಮಿಕ ಮುಖಂಡರು ಮಾಡಬೇಕು. ಕೊರೊನಾ ಏರಿಕೆಯ ಶೇಕಡವಾರು ಗಮನದಲ್ಲಿ ಇಟ್ಟುಕೊಂಡು ನಿಯಮ ಸಡಿಲಿಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೀಳುಮಟ್ಟದ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ಯಾರು ಟೀಕೆ ಮಾಡುವ ವಿಚಾರದಲ್ಲಿ ಎಲ್ಲೆ ಮೀರಬಾರದು. ನಾನು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದೇನೆ. ಈ ವಿಚಾರವನ್ನು ಅವರ ಬಳಿಯೆ ಕೇಳಬೇಕು ಎಂದರು.
ENGLISH SUMMARY…
Proposal of privatizing ESCOM’s not in front of the govt.: Minister Sunil Kumar
Mysuru, August 25, 2021 (www.justkannada.in): Power Minister Sunil Kumar has informed that the proposal of privatizing ESCOM’s is not before the government.
The Cesc meeting was held at the Government Guest House in Mysutu today under the leadership of Power Minister Sunil Kumar. MP Pratap Simha and Cesc officials were present.
Speaking to the press persons after the meeting Minister Sunil Kumar informed that the proposal of privatizing ESCOM’s is not before the government. “I don’t have any information about the Centre’s bill. The increasing rates of electricity supply is also not in the hands of the government It is left to the ESCOM’s to decide. The government cannot take any decision in this regard. However, privatization will not be made,” he clarified.
In his response to the celebration of the Ganesha festival, he informed that the State Government’s responsibility is to control the COVID-19 Pandemic. “Introducing rules is not a major factor, people should cooperate. The pandemic can be controlled only if people cooperate. It doesn’t mean the Ganesha festival should not be celebrated grandly. But it is important to be cautious. The associations concerned and religious heads should warn the people. The government is cotemplating on easing COVID rules keeping in mind the fluctuation in cases,” he added.
Keywords: Power Minister/ Sunil Kumar/ privatisation/ ESCOM’s/ Ganesha festival
Key words: Power Minister -Sunil Kumar – privatization – power corporations