ಮೈಸೂರು,ಸೆಪ್ಟಂಬರ್,14,2024 (www.justkannada.in): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸೆಪ್ಟಂಬರ್ 17 ರಂದು ಮೈಸೂರಿನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
17-09-2024ರ ಮಂಗಳವಾರ ಬೆಳಗ್ಗೆ 10:00 ರಿಂದ ಸಂಜೆ 5:30 ಘಂಟೆಯವರೆಗೆ 66/11 ಕೆ.ವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅನಿಯಮಿತ ನಿಲುಗಡೆಯಾಗಲಿದೆ. ಆದುದರಿಂದ ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಮುಖ್ಯ ಪ್ರದೇಶಗಳು ಈ ಕೆಳಕಂಡಂತಿದೆ
ರಾಮಾನುಜ ರಸ್ತೆ 01 ರಿಂದ 09ನೇ ಕ್ರಾಸ್ ವರೆಗೆ, ಹೊಸಬಂಡಿಕೇರಿ, ಜೆ.ಎಸ್.ಎಸ್. ಆಸ್ಪತ್ರೆ, ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂನ ಹಲವು ಭಾಗಗಳು, ತ್ಯಾಗರಾಜ ರಸ್ತೆ, ಚಾಮುಂಡಿಬೆಟ್ಟ ಮತ್ತು ಪಾದ, ಗುಂಡುರಾವ್ ನಗರ, ದತ್ತನಗರ, ಮುನೇಶ್ವರನಗರ, ಗೌರಿಶಂಕರನಗರ, ನಂಜನಗೂಡು ಟೋಲ್ ಗೇಟ್, ತಾವರೆಕೆರೆ, ಜಾಕಿ ಕ್ವಾರ್ಟಸ್, ರೇಸ್ ಕೋರ್ಸ್ ಹಿಂಭಾಗ, ಸಬರ್ಬ್ ಬಸ್ ನಿಲ್ದಾಣ. ನಜರ್‌ಬಾದ್. ಇಟ್ಟಿಗೆಗೂಡು. ಮೃಗಾಲಯದ ಸುತ್ತ-ಮುತ್ತ, ಸರ್ಕಾರಿ ಅಥಿತಿ ಗೃಹ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು, ತಾಲ್ಲೂಕು ಕಛೇರಿ, ಡಿ. ದೇವರಾಜ ಅರಸು ರಸ್ತೆ, ಬಿ.ಎನ್. ರಸ್ತೆ, ಚಾಮುಂಡಿಬೆಟ್ಟ, ಸಿದ್ದಾರ್ಥನಗರ, ಕುರುಬಾರಹಳ್ಳಿ, ಜೆ.ಸಿ. ನಗರ, ಕೆ.ಸಿ ನಗರ, ಜೆ.ಎಸ್.ಎಸ್ ಆಯುರ್ವೇದಿಕ್ ಸುತ್ತ-ಮುತ್ತ, ಅರಮನೆ ಸುತ್ತ-ಮುತ್ತಲಿನ ಪ್ರದೇಶಗಳು, ಶ್ರೀ ಹರ್ಷ ರಸ್ತೆ, ಸಯ್ಯಾಜೀರಾವ್ ರಸ್ತೆ, ಇರಿನ್ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳು, ಧನ್ವಂತರಿ ರಸ್ತೆ ಹಾಗೂ ಶಿವರಾಂಪೇಟೆ ಸುತ್ತ-ಮುತ್ತಲಿನ ಪ್ರದೇಶಗಳು.
Key words: Power, outage, Mysore, September 17