ಮೈಸೂರು,ಜೂ,1,2020(www.justkannada.in): ಕೇಂದ್ರ ಸರ್ಕಾರವು ವಿದ್ಯುತ್ ಕಾಯ್ದೆ 2020ಅನ್ನು ತಿದ್ದುಪಡಿ ಹಾಗೂ ಖಾಸಗೀಕರಣ ಮಾಡಲು ಹೊರಟಿರುವುದನ್ನ ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರಿನ ಎಂಪಿಎಲ್ ಆವರಣದಲ್ಲಿ ನೂರಾರು ನೌಕರರು ಸೇರಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಕೆಲಸಕ್ಕೆ ಹಾಜರಾಗಿ ನೌಕರರು ಧರಣಿ ನಡೆಸಿದರು. ಕೂಡಲೇ ಈ ಕಾಯ್ದೆ ತಿದ್ದುಪಡಿಯನ್ನ ಕೈಬಿಡಬೇಕು. ಖಾಸಗೀಕರಣದಿಂದ ನಮಗೆ ಹಾಗೂ ಸರ್ಕಾರಕ್ಕೆ ತೊಂದರೆ ಆಗುತ್ತದೆ. ಇದರಿಂದ ಎಲ್ಲಾ ರೈತಾಪಿ ವರ್ಗಕ್ಕೆ ತೊಂದರೆ ಆಗುತ್ತೆ. ಆದ್ದರಿಂದ ಕೇಂದ್ರ ಸರ್ಕಾರ ಈ ತೀರ್ಮಾನವನ್ನ ಕೈಬಿಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
Key words: power –privatization- Mysore -employees -protest