ನವದೆಹಲಿ, ನವೆಂಬರ್ 05, 2019 (www.justkannada.in): ಐಪಿಎಲ್ ಟ್ವೆಂಟಿ-20 ಆವೃತ್ತಿಯಲ್ಲಿ ಪವರ್ ಪ್ಲೇಯರ್ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಇನ್ನೊಂದು ಪ್ರಯೋಗಕ್ಕೆ ಬಿಸಿಸಿಐ ಮುಂದಾಗಿದೆ.
ಈ ನಿಯಮದಲ್ಲಿ ಆಟದ ಯಾವುದೇ ಹಂತದಲ್ಲಿ ಆಟಗಾರರನ್ನು ಬದಲಿಸಲು ತಂಡಗಳಿಗೆ ಅವಕಾಶವಿರುತ್ತದೆ. ಬದಲಿ ಆಟಗಾರನನ್ನು ವಿಕೆಟ್ನ ಪತನದ ಬಳಿಕ ಅಥವಾ ಓವರ್ ಮುಗಿದ ಬಳಿಕ ಕಣಕ್ಕಿಳಿಸಬಹುದಾಗಿದೆ.
ಈ ಪರಿಕಲ್ಪನೆಯನ್ನು ಈಗಾಗಲೇ ಅಂಗೀಕರಿಸಲಾಗಿದೆ, ಆದರೆ ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.