ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ನಿರೀಕ್ಷೆ ನಮಗಿಲ್ಲ: ಹೋರಾಟ ಮುಂದುವರಿಕೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು,ಜನವರಿ,2,2025 (www.justkannada.in):  ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ನಿರೀಕ್ಷೆ ನಮಗಿಲ್ಲ, ಹೀಗಾಗಿ ನಾವು ಜನರಲ್ಲಿ ಜಾಗೃತಿ ಮೂಡಿಸಲು ಹೋರಾಟ ಮುಂದುವರೆಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರ ವಿರುದ್ಧ ಹಲವು ರೀತಿಯ ಗಂಭೀರ ಆರೋಪಗಳಿವೆ. ಈಶ್ವರಪ್ಪನವರ ಪ್ರಕರಣ ಹಾಗೂ ಯಡಿಯೂರಪ್ಪನವರ ಪ್ರಕರಣದಲ್ಲಿ ಆಡಿದ ಮಾತುಗಳು ಅವರಿಗೆ ನೆನಪಿಲ್ಲ. ಚಂದ್ರಶೇಖರ್ ಆತ್ಮಹತ್ಯೆ ಕಾರಣದಿಂದ ವಾಲ್ಮೀಕಿ ಹಗರಣ ಹೊರಬಂತು. ನಂತರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದಿಟ್ಟು‌ ರುದ್ರಣ್ಣ ಅತ್ಮಹತ್ಯೆಗೆ ಶರಣಾದರು. ಇಂಥ ಹಲವು ಆತ್ಮಹತ್ಯೆಗಳು ಇಲ್ಲಿ ನಡೆಯುತ್ತಲೇ ಇವೆ. ಸಿದ್ಧಲಿಂಗ ಸ್ವಾಮೀಜಿ ಹಾಗೂ ಹಲವರ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಡೆತ್ ನೋಟ್ ನಲ್ಲಿ ಇದೆ ಎಂದಿದ್ದಾರೆ ಎಂದು ತಿಳಿಸಿದರು

ಈಗ ಪ್ರಿಯಾಂಕ್ ಖರ್ಗೆಯವರ ತಂದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಏನೇನೋ ಮಾತನಾಡ್ತಾರೆ. ಆದರೆ, ಖರ್ಗೆ ಅವರ ಹಿಂದಿನ ರಾಜಕಾರಣದಲ್ಲಿ ಈ ರೀತಿ ಇರಲಿಲ್ಲ. ಪ್ರಿಯಾಂಕ್ ಖರ್ಗೆ ಈಗಲೇ ದುರಹಂಕಾರದಿಂದ ವರ್ತಿಸುತ್ತಾ ಇದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

Key words: not expect, Priyank Kharge, resign, Union Minister, Prahlad Joshi