ಬಜೆಟ್ ನಲ್ಲಿ ಬರೀ ಕೇಂದ್ರ ಸರ್ಕಾರ ಬಯ್ಯುವ ಕೆಲಸವಾಗಿದೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಹುಬ್ಬಳ್ಳಿ, ಮಾರ್ಚ್,8,2025 (www.justkannada.in):  ನಿನ್ನೆ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಬರೀ ಕೇಂದ್ರ ಸರ್ಕಾರವನ್ನೇ ಬಯ್ಯುವ ಕೆಲಸವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ,  ಕುಣಿಯಲು ಬಾರದಿದ್ರೆ ನೆಲ ಡೊಂಕು ಅನ್ನುವ ಹಾಗೆ ಎಲ್ಲಕ್ಕೂ ಕೇಂದ್ರದ ಮೇಳೆ ಬೊಟ್ಟು ಮಾಡುತ್ತಿದ್ದಾರೆ. ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲ. ಪ್ರತಿಯೊಂದಕ್ಕೂ ಕೇಂದ್ರದ ಬಗ್ಗೆ ಮಾತನಾಡುತ್ತಾರೆ. ಕೋವಿಡ್ ನಂತರ ನಾವು ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ. ಇವತ್ತು ಕೇಂದ್ರದಲ್ಲಿ 50 ಲಕ್ಷ ಕೋಟಿ ಬಜೆಟ್ ತಲುಪಿದೆ.  ಇವರ ಕಾಲದಲ್ಲಿ 15 ಲಕ್ಷ ಕೋಟಿ ಇತ್ತು.  ನಾವು ಕರ್ನಾಟಕಕ್ಕೆ ಬಡ್ಡಿ ರಹಿತ ಸಾಲ ನೀಡಿದ್ದೇವೆ. ಸಿಎಂ ಇದನ್ನ ಅರ್ಥ ಮಾಡಿಕೊಳ್ಳಬೇಕು.  ಸಿಎಂ ಸಿದ್ದರಾಮಯ್ಯ ಹೋಗುವ ಮುನ್ನ ಸತ್ಯ ಮಾತಾಡಿ ಎಂದು ವಾಗ್ದಾಳಿ ನಡೆಸಿದರು.

ಬಜೆಟ್ ಓದಿದ್ದು ಪಾಕ್ ನವರಿಗೂ ಅರ್ಥ ಆಗಿಲ್ಲ ಅನ್ನಿಸುತ್ತೆ. ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಮೀಸಲಾತಿ ಏಕೆ..?  ಉಳಿದ ಸಣ್ಣಪುಟ್ಟ ಗುತ್ತಿಗೆದಾರರು ಏನು ಮಾಡಬೇಕು ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

Key words: state budget, central government, Union Minister, Prahlad Joshi