ಹಾಸನ,ಜುಲೈ,8,2021(www.justkannada.in): ಜೆಡಿಎಸ್ ಪಕ್ಷ ಉಳಿಯೋದಾದ್ರೆ ಪ್ರಜ್ವಲ್ ರೇವಣ್ಣ ಅವರಿಂದ ಮಾತ್ರ ಎಂದು ಹೇಳಿಕೆ ನೀಡಿದ್ಧ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ, ಕೆಆರ್ ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕುಮಾರಸ್ವಾಮಿ ಸೇರಿ ಜೆಡಿಎಸ್ ನಾಯಕರು ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ಭಾರಿ ಜಟಾಪಟಿ, ವಾಗ್ವಾದ ನಡೆಯುತ್ತಿದೆ. ಈ ಮಧ್ಯೆ ಜೆಡಿಎಸ್ ಪಕ್ಷ ಉಳಿಯೋದಾದ್ರೆ ಪ್ರಜ್ವಲ್ ರೇವಣ್ಣ ಅವರಿಂದ ಮಾತ್ರ ಎಂದು ಹೇಳಿಕೆ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ರೇವಣ್ಣ, ಅವುಕ್ಕೆಲ್ಲಾ ರಿಯಾಕ್ಟ್ ಮಾಡಲು ಹೋದರೆ ನಾನು ಪೊಳ್ಳೆದ್ದು ಹೋಗುತ್ತೇವೆ. ಪ್ರಜ್ವಲ್ ರೇವಣ್ಣ ನನಗೆ ಫೋನ್ ಮಾಡಿದ್ದ. ನನ್ನ ಹೆಸರು ತರುತ್ತಿದ್ದಾರೆ, ನಮ್ಮ ಕುಟುಂಬವನ್ನು ಒಡೆಯಲು ಎಂದು ಕರೆ ಮಾಡಿದ್ದ. ಯಾರಿಂದಲೂ ದೇವೇಗೌಡರ ಕುಟುಂಬವನ್ನು ಒಡೆಯಲು ಆಗಲ್ಲ. ದೇವೇಗೌಡರು ಬದುಕಿರುವವರಿಗೂ ಆಗಲ್ಲ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ಮಾಡಿ ಕ್ರಮ ಕೈಗೊಂಡು, ಮುಟ್ಟುಗೋಲು ಹಾಕಿಕೊಳ್ಳಲಿ. ಸರ್ಕಾರದ ದುಡ್ಡು ಲೂಟಿ ಮಾಡುತ್ತಿರುವವರನ್ನು ಬಲಿ ಹಾಕಲಿ. ಅಂಬರೀಶ್ ಬಗ್ಗೆ ಅಪಾರವಾದ ಗೌರವವಿದೆ. ವಿಷ್ಣುವರ್ಧನ್ ಅಂತಹ ನಟ ಯಾರಾದರೂ ಸಿಕ್ಕಿತ್ತಾರಾ ಎಂದರು.
ಪ್ರಜ್ವಲ್ ನ ಎತ್ತಿಕಟ್ಟಿ ಕುಟುಂಬವನ್ನು ಹೊಡೆದಾಡಿಸುವ ಕಾರ್ಯಕ್ರಮ ಯಾರಿಂದಲೂ ಆಗಲ್ಲ.
ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡಲ್ಲ. ಬಡವರ ಬಗ್ಗೆ ಕರುಣೆ ಇರುವ ರಾಜಕಾರಣಿ ಎಂದರೆ ಕುಮಾರಸ್ವಾಮಿ. ದೇವೇಗೌಡರ ಕುಟುಂಬ ಯಾರಿಂದಲೂ ಸಂಸ್ಕೃತಿ ಕಲಿಯಬೇಕಿಲ್ಲ. ಪ್ರಜ್ವಲ್ ನ ಎತ್ತಿಕಟ್ಟಿ ಕುಟುಂಬವನ್ನು ಹೊಡೆದಾಡಿಸುವ ಕಾರ್ಯಕ್ರಮ ಯಾರಿಂದಲೂ ಆಗಲ್ಲ. ಜೆಡಿಎಸ್ ಪಕ್ಷ ಉಳಿಸಲು ಕಾರ್ಯಕರ್ತರಿದ್ದಾರೆ. ಒಂದು ಕುಟುಂಬದಿಂದ ಪಕ್ಷ ಉಳಿಯಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಗೆ ಹೆಚ್.ಡಿ ರೇವಣ್ಣ ಟಾಂಗ್ ನೀಡಿದರು.
ನಮ್ಮದೇನಾದರೂ ಕ್ರಷರ್ ಇದಿಯಾ, ಕಾಲೇಜುಗಳಿವೆಯಾ. ಕುಮಾರಸ್ವಾಮಿ ದುಡ್ಡು ಹೊಡೆಯುತ್ತಾನೆ ಎನ್ನುತ್ತಾರಲ್ಲ ಅದು ನ್ಯಾಯವಾ..? ಅಂಬರೀಶ್ ನಮ್ಮ ಕಣ್ಮುಂದೆ ಇಲ್ಲ, ಅವರ ಬಗ್ಗೆ ಸಣ್ಣದಾಗಿ ಮಾತನಾಡಿದರೆ ಭಗವಂತ ನಮಗೆ ಒಳ್ಳೆಯದಾಗಲ್ಲ. ಅಂಬರೀಶ್, ವಿಷ್ಣುವರ್ಧನ್ ರಂತಹವರು ಸಿಗುತ್ತಾರ..? ಒಬ್ಬ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೇಗೆ ನಡೆದುಕೊಂಡರು. ಹೆಲಿಕಾಪ್ಟರ್ ನಲ್ಲಿ ಅಂಬರೀಶ್ ಶವ ಮಂಡ್ಯಕ್ಕೆ ತೆಗೆದುಕೊಂಡು ಹೋದರು. ಕುಮಾರಸ್ವಾಮಿ ಪ್ರಚಾರ ತೆಗೆದುಕೊಳ್ಳಲ್ಲ. ಪ್ರಚಾರ ಇಲ್ಲದೆ ಕೆಲಸ ಮಾಡಿದ್ದು ಕುಮಾರಸ್ವಾಮಿ. ಪ್ರಚಾರ ತೆಗೆದುಕೊಳ್ಳದಿರಿವುದೇ ಕುಮಾರಸ್ವಾಮಿ ದೌರ್ಬಲ್ಯ ಎಂದು ಹೆಚ್.ಡಿ ರೇವಣ್ಣ ಹೇಳಿದರು.
ಕೋಮುವಾದಿಗಳ ಜೊತೆ ಕಾಂಗ್ರೆಸ್ ಮುಖಂಡರು ಇದ್ದಾರೆ. ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ಅವರ ಮನೆಯ ಕದ ತಟ್ಟಿ, ತನಿಖೆ ಮಾಡಬೇಡಿ ಎಂದಿದ್ದಾರೆ. ಎರಡು ವರ್ಷದಿಂದ ಸುಮ್ಮನೆ ಕುಳಿತಿದ್ದಿದ್ದರು. ಇನ್ನೂ ಮೂರು ವರ್ಷ ಸಮಯವಿದೆ, ಲೂಟಿ ಮಾಡಿದ್ದರೆ ಬಲಿ ಹಾಕಿ. ಯಡಿಯೂರಪ್ಪ ಸರ್ಕಾರದ ಅಧಿಕಾರಿಗಳೆ ಕೆ.ಆರ್.ಎಸ್. ಡ್ಯಾಂಗೆ ತೊಂದರೆಯಿಲ್ಲ ಎಂದಿದ್ದಾರೆ. ಇನ್ನೂ ಮೂರು ವರ್ಷ ಸಮಯವಿದೆ. ಯಡಿಯೂರಪ್ಪ ಅವರ ಬಳಿ ಕುಳಿತುಕೊಂಡು ಬಲಿ ಹಾಕಲಿ. ಅವರು ಸಂಸದರಾಗಲು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಹಾಯ ಮಾಡಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಟ್ಟಹಾಕಲಿ ಎಂದು ಹೆಚ್.ಡಿ ರೇವಣ್ಣ ಕಿಡಿಕಾರಿದರು.
Key words: Prajwal Ravanna- former minister-HD Revanna- outrage- against -Sumalatha Ambarish