ಹಾಸನ, ಮೇ 24,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರು ದೂರು ನೀಡಲು ಎಸ್ಐಟಿ (SIT) ಆರಂಭಿಸಿದ್ದ ಸಹಾಯವಾಣಿಗೆ ಈವರೆಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂಬ ಮಾಹಿತಿ ತಿಳಿದು ಬಂದಿದೆ.
ಆದರೆ ಸಹಾಯವಾಣಿಗೆ ಕರೆ ಮಾಡಿರುವ ಸಂತ್ರಸ್ತ ಮಹಿಳೆಯರು ಇದುವರೆಗೂ ದೂರು ನೀಡಿಲ್ಲ. ಹೀಗಾಗಿ ಹೆಲ್ಪ್ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಮತ್ತೊಮ್ಮೆ ಎಸ್ಐಟಿ ಮನವಿ ಮಾಡಿದೆ ಎನ್ನಲಾಗಿದೆ.
6360938947 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ದೂರು ನೀಡಲು ಎಸ್ಐಟಿ ಮನವಿ ಮಾಡಿದೆ. ದೂರು ನೀಡಿದರೆ ಮಾಹಿತಿ ಸಂಗ್ರಹಿಸಲು ಸಿದ್ದರಿದ್ದೇವೆ. ಗುರುತು, ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್ಐಟಿ ಭರವಸೆ ನೀಡಿದೆ.
Key words: Prajwal Revanna, case, 30 calls, SIT, helpline