ತೊಂದರೆಗೊಳಗಾದವರು ಬಂದು ದೂರು ನೀಡಲಿ, ರಕ್ಷಣೆ ನೀಡುತ್ತೇವೆ- ಡಾ.ಜಿ.ಪರಮೇಶ್ವರ್.

ಬೆಂಗಳೂರು,ಮೇ,31,2024 (www.justkannada.in):  ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೊಂದರೆಗೊಳಗಾದವರು ಬಂದು ಎಸ್ ಐಟಿಗೆ ದೂರು ನೀಡಲಿ, ದೂರು ನೀಡುವವರಿಗೆ ನಾವು ರಕ್ಷಣೆ ನೀಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್,   ಸಂತ್ರಸ್ತೆಯರು ಪೊಲೀಸರು ಹಾಗೂ ಎ ಸ್‍ಐಟಿ ಮುಂದೆ ಬಂದು ಧೈರ್ಯವಾಗಿ ದೂರು ನೀಡಲಿ.  ಕಾನೂನಿನ ಪ್ರಕಾರ ಎಸ್ ಐಟಿ ಕ್ರಮ ಕೈಗೊಳ್ಳಲಿದೆ. ಅಧಿಕಾರಿಗಳು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.

ಅಧಿಕಾರಿಗಳಿಗೆ  ಪ್ರಜ್ವಲ್ ರೇವಣ್ಣ ತನಿಖಗೆ ಸಹಕಾರ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಸಹಜವಾಗಿಯೇ ಅವರು ತನಿಖೆಗೆ ಸಹಕಾರ ಕೊಡಬೇಕು . ಇನ್ನೂ ಅವರ ರಾಜತಾಂತ್ರಿಕ ಪಾಸ್‍ ಪೋರ್ಟ್ ರದ್ದಾಗುತ್ತೆ. ಅದೆಲ್ಲಾ ತಿಳಿದುಕೊಂಡು ಅವರೇ ಮರಳಿ ಬಂದಿರಬಹುದು  ಪರಮೇಶ್ವರ್ ತಿಳಿಸಿದರು.

Key words: Prajwal Revanna, Case, Home minister, Parameshwar