ಕಲ್ಬುರ್ಗಿ,ಮೇ,2,2024 (www.justkannada.in): ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನ ಕರೆತರಲು ಎಸ್ ಐಟಿ ಕ್ರಮ ಕೈಗೊಳ್ಳುತ್ತದೆ. ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸಲು ಎಸ್ ಐಟಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣಗೆ ಈಗಾಗಲೇ ಲುಕ್ ಔಟ್ ನೋಟಿಸ್ ನೀಡಲಾಗಿದೆ. ಹಾಗಾಗಿ ವಿದೇಶದಲ್ಲಿರುವ ಅವರನ್ನು ಶೀಘ್ರದಲ್ಲಿ ವಾಪಸ್ ಕರೆಸಲಾಗುತ್ತದೆ. ಎಲ್ಲಾ ಕಡೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೇವೆ. ವಿಮಾನ ನಿಲ್ದಾಣ, ಬಂದರು ಸೇರಿ ಎಲ್ಲೆಡೆ ಲುಕ್ ಔಟ್ ನೋಟಿಸ್ ನೀಡಿದ್ದೇವೆ ಎಂದರು.
ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಸಿಎಂ ಸಿದ್ದರಾಮಯ್ಯ ಯಾಕೆ ಅವರನ್ನು ಕಳುಹಿಸುತ್ತಾರೆ? ಪ್ರಧಾನಿ ರಾಜ್ಯದ ಕಾನೂನು ಸುವ್ಯವಸ್ಥೆ ಕೆಟ್ಟಿದೆ ಅಂತಾರೆ ಅವರಿಗೆ ತಪ್ಪು ಮಾಹಿತಿ ಇರಬಹುದು ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಚೆನ್ನಾಗಿದೆ. ನೇಹಾ ಅತ್ತೆ ಆರೋಪಿಯನ್ನು ಒಂದು ಗಂಟೆಯಲ್ಲಿ ಹಿಡಿದರು ರಾಮೇಶ್ವರಂ ಕೇಸ್ ನಾನೇ ಮಾನಿಟರ್ ಮಾಡಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿದೆ ಬೇಕಿದ್ರೆ ನಾನು ಈ ಬಗ್ಗೆ ಅಂಕಿ ಅಂಶಗಳನ್ನ ನೊಡುತ್ತೇನೆ ರಾಜ್ಯದಲ್ಲಿ ಬಿಜೆಪಿ ಅವಧಿಗಿಂತ ನಮ್ಮ ಅವಧಿಯ ಆಡಳಿತ ಚೆನ್ನಾಗಿದೆ. ಪ್ರಧಾನಿ ತಪ್ಪು ಮಾಹಿತಿಗಳನ್ನ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಹೊರಗೆ ಹೋಗಿದ್ದಕ್ಕೆ ಇಷ್ಟೆಲ್ಲಾ ಆಗುತ್ತಿದೆ. ಪ್ರಜ್ವಲ್ ಇಲ್ಲೇ ಇದ್ದಿದ್ದರೇ ನಾವೇ ತನಿಖೆ ಮಾಡುತ್ತಿದ್ದವು ಎಂದರು.
ರೇವಣ್ಣ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಸರ್ಕಾರ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದೆ ಇದರಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯ ಇಲ್ಲ. ಇದನ್ನ ನಾವು ಸಾಮಾನ್ಯ ಪ್ರಕರಣದಂತೆ ನೋಡಲಾಗಲ್ಲ. ಬಹಳ ಎಚ್ಚರಿಕೆಯಿಂದ ವಿಚಾರಣೆ ಮಾಡಲಾಗುತ್ತಿದೆ. ದೂರು ನೀಡುವ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
Key words: Prajwal Revanna, investigation, Dr. G. Parameshwar