ಹಾವೇರಿ,ಏಪ್ರಿಲ್, 30,2024 (www.justkannada.in): ಪ್ರಜ್ವಲ್ ರೇವಣ್ಣ ಸಂಸದರಾಗಿದ್ದು ಜೆಡಿಎಸ್-ಬಿಜೆಪಿ ಮೈತ್ರಿಯಿಂದಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ. ಈಗ ಪ್ರಜ್ವಲ್ ರೇವಣ್ಣ ಗೆದ್ದರೇ ನಮ್ಮ ಪಾರ್ಟಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ಕೊಟ್ಟರು.
ಇಂದು ಮಾತನಾಡಿದ ಆರ್.ಅಶೋಕ್, ಪ್ರಜ್ವಲ್ ರೇವಣ್ಣ ಜೆಡಿಎಸ್ ನಿಂದ ಅಮಾನತು, ಇದು ಜೆಡಿಎಸ್ ಪಕ್ಷದ ಆಂತರಿಕ ವಿಚಾರ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪೊಲೀಸರಿಂದ ತನಿಖೆಯಾಗುತ್ತಿದೆ ನೊಂದ ಮಹಿಳೆಯರಿಂದ ಮಾಹಿತಿ ಕಲೆ ಹಾಕಲಿದ್ದಾರೆ . ಘಟನೆ ಆಗಿದ್ದು ನಿಜ ಅನ್ನೋ ಕಾರಣಕ್ಕೆ ಉಚ್ಚಾಟನೆ ಮಾಡಿದ್ದಾರೆ. ಜೆಡಿಎಸ್ ಪಕ್ಷದಿಂದ ಹೊರಹಾಕಿದ್ದನ್ನ ಸ್ವಾಗತ ಮಾಡುತ್ತೇನೆ ಎಂದರು.
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಜೆಡಿಎಸ್- ಕಾಂಗ್ರೆಸ್ ಮೈತ್ರಿಯಿಂದ. ಈಗ ಪ್ರಜ್ವಲ್ ಗೆದ್ದರೇ ನಮ್ಮ ಪಾರ್ಟಿ ತೀರ್ಮಾನ ತೆಗೆದುಕೊಳ್ಳುತ್ತೆ. ಪೆನ್ ಡ್ರೈವ್ ಹೇಗೆ ಹೊರಗಡೆ ಬಂತು ಅನ್ನೋದು ಗೊತ್ತಾಗಬೇಖು. ಈ ಘಟನೆ ನಡೆದಾಗ ಕೇಸ್ ದಾಖಲಾಗಿತ್ತಾ. ರಾಜ್ಯ ಪೊಲೀಸರು ಕೇಂದ್ರಕ್ಕೆ ಮಾಹಿತಿ ನೀಡಿಲ್ಲ ಎಂದು ಆರ್.ಅಶೋಕ್ ತಿಳಿಸಿದರು.
Key words: Prajwal Revanna, MP, JDS, Congress, R.Ashok