ಅತ್ಯಾಚಾರ ಪ್ರಕರಣ :  ಆರೋಪ ನಿರಾಕರಿಸಿದರೆ ʼ ವಿಶೇಷ ಪರೀಕ್ಷೆ ʼ ಎದುರಿಸಬೇಕಾಗುತ್ತದೆ ಪ್ರಜ್ವಲ್‌.

Rape case: Prajwal to face 'special test' if he denies allegations.

 

This is how Ashok Nayak subtly conveyed the message that if prajwal, the rape accused, tries to evade the case by saying that he is not the person on the mobile phone (because his face is not visible), then the prosecution is ready for a private examination.

ಬೆಂಗಳೂರು, ಜೂ.01,2024 (www.justkannada.in news)  ಎಸ್.ಐ.ಟಿ ವಶದಲ್ಲಿರುವ  ಅತ್ಯಚಾರ ಆರೋಪಿ ಪ್ರಜ್ವಲ್‌ ರೇವಣ್ಣ, ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಎಂದು ತನ್ನ ಮೇಲಿನ ಆರೋಪ ನಿರಾಕರಿಸಿದರೆ ಆಗ ʼ ಅಪರೂಪದ ಪರೀಕ್ಷೆʼ  ಎದುರಿಸುವುದು ಅನಿವಾರ್ಯ.

ಕಳೆದ ಒಂದು ತಿಂಗಳಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ, ಶುಕ್ರವಾರವಷ್ಟೆ ಪೊಲೀಸರಿಗೆ ಶರಣಾಗಿದ್ದ. ಬಳಿಕ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಈ ವೇಳೆ, ಪ್ರಾಸಿಕ್ಯೂಟ‌ರ್ ಅಶೋಕ್ ನಾಯಕ್ ಅವರು, ‘ಪ್ರಜ್ವಲ್ ರೇವಣ್ಣ ಕಾಮ ಕೇಳಿಯನ್ನೆಲ್ಲಾ ತಮ್ಮದೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಿಕೃತಿ ಮೆರೆದಿದ್ದಾರೆ. ಅದರಲ್ಲಿ ತಮ್ಮ ಮುಖ ಕಾಣುವುದಿಲ್ಲ, ಹೀಗಾಗಿ ತಾನು ಬಚಾವ್ ಆಗಬಹುದು ಎಂದು ಅವರೇನೋ ಅಂದುಕೊಂಡಿರಬಹುದು. ಆದರೆ, ನಾಳೆ ಅವರ ಗುಪ್ತಾಂಗವನ್ನು ವೈದ್ಯಕೀಯ ಪರೀಕ್ಷೆ ನಡೆಸಿ; ವಿಡಿಯೊದಲ್ಲಿರುವ ದೃಶ್ಯಾವಳಿಗೆ ಹೋಲಿಕೆ ಮಾಡಿದರೆ ಸತ್ಯ ಪತ್ತೆಯಾಗುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಅ ಮೂಲಕ ಅತ್ಯಾಚಾರ ಆರೋಪಿ ಪ್ರಜ್ವಲ್, ಒಂದು ವೇಳೆ ಪ್ರಕರಣದಿಂದ ಬಚಾವಾಗಲು, ಮೊಬೈಲ್‌ ನಲ್ಲಿ ಇರುವ ವ್ಯಕ್ತಿ ನಾನಲ್ಲ (ಮುಖ ಕಾಣಿಸಿದ ಕಾರಣ) ಎಂದು ಹೇಳಿಕೆ ನೀಡಿ ನುಣುಚಿಕೊಳ್ಳಲು ಯತ್ನಿಸಿದರೆ, ಆಗ ಪ್ರಾಸಿಕ್ಯೂಷನ್‌ ಗುಪ್ತಾಂಗ ಪರೀಕ್ಷೆಗೂ ರೆಡಿ ಎಂಬ ಸಂದೇಶವನ್ನು ಅಶೋಕ್‌ ನಾಯಕ್‌ ಸೂಕ್ಷ್ಮವಾಗಿ ದಾಟಿಸಿದ ಪರಿ ಇದು.

key words: Rape case, Prajwal, to face ‘special test’, if he denies allegations.

 

SUMMARY: 

Prajwal Revanna, who is in the custody of the SIT, will have to face a “rare test” if he denies the allegations that he is not the person in the video.

Jd(S) MP Prajwal Revanna, who had been hiding abroad for the past one month, surrendered before the police on Friday. He was later produced before the court by the police.

This is how Ashok Nayak subtly conveyed the message that if prajwal, the rape accused, tries to evade the case by saying that he is not the person on the mobile phone (because his face is not visible), then the prosecution is ready for a private examination.