ಮೈಸೂರು, ಜ.೨೪, ೨೦೨೫ : ಬೆಂಗಳೂರು ಅರಮನೆ ರಸ್ತೆ ಟಿ.ಡಿ.ಆರ್ ವಿವಾದ. ಸರ್ಕಾರದ ಸುಗ್ರೀವಾಜ್ಞೆಗೆ ಪ್ರಮೋದ ದೇವಿ ಒಡೆಯರ್ ಟಾಂಗ್. ನಾನು ಸಂಪುಟ ನಿರ್ಧಾರದ ಬಗ್ಗೆ ನೋಡಿದೆ. 1996 ರಲ್ಲಿ ಅಕ್ವಿಜೇಶನ್ ಅಂಡ್ ಸ್ಟೇ ಆರ್ಡರ್ ಕೂಡ ನಮ್ಮ ಬಳಿಯಿದೆ.
ಸುಪ್ರೀಂ ಕೋರ್ಟ್ ಕೂಡ ಬೆಂಗಳೂರು ಅರಮನೆ ಜಾಗದ ಬಗ್ಗೆ ಹೇಳಿದೆ . ಕರ್ನಾಟಕದ ಸರ್ಕಾರದ ಅಣತಿಯಂತೆ ಇದುವರೆಗೂ ಅಲ್ಲಿ ಎಲ್ಲವೂ ನಡೆದಿದೆ. ಯಾವುದು ಕೂಡ ಅವರಿಗೆ ಗೊತ್ತಿಲ್ಲದ ರೀತಿ ನಡೆದಿಲ್ಲ. ಅವರು ಸ್ಟೇ ಇಲ್ಲ ಅಂದಿದ್ದಾರೆ, ಆದ್ರೆ ಸ್ಟೇ ಇದೇ, ಒನರ್ ಶಿಪ್ ಇದೆ. ಈಗಲೂ ನಾವೇ ಬೆಂಗಳೂರು ಅರಮನೆ ಜಾಗದ ಓನರ್ ಆಗಿದ್ದೇವೆ.
ನಾನು ಕೆಲ ಹೆಸರನ್ನು ಹೇಳುತ್ತ್ತೇನೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಅಕ್ಕ ತಂಗಿಯರು ಕೂಡ ಓನರ್ ಶಿಪ್ ಅಲ್ಲಿದ್ದಾರೆ ಇನ್ನೂ ಅನೇಕರ ಹೆಸರಿದೆ. ರಸ್ತೆಗೆ ಹೋಗಿರುವ ಪ್ರಾಪರ್ಟಿ ಕೂಡ ನಮ್ಮದೇ . 15 ಎಕರೆ 36 ಗುಂಟೆ ಬಳಸಿದ್ದಾರೆ.
ಟಿ.ಡಿ.ಆರ್ ಕೊಡಬಾರದು ಅಂತ ಈ ರೀತಿ ಮಾಡಿದ್ದಾರೆ
ಟಿ.ಡಿ.ಆರ್ ಹೇಗೆ ಬಂತು ಅಂದ್ರೆ, ಜನರಿಗೆ ರಸ್ತೆ ಬೇಕು , ನಿಮ್ಮ ಜಾಗ ಬಳಸಿಕೊಳ್ಳುತ್ತೆವೆ. ನಿಮಗೆ ಟಿ.ಡಿ.ಆರ್ ಕೊಡುತ್ತವೆ ಅಂತ ಹೇಳಿದ್ದು ಬಿಬಿಎಂಪಿ. ಟಿ.ಡಿ.ಆರ್ ಕೊಡುತ್ತೇವೆ ಅಂತ ಕೋರ್ಟ್ ಗೆ ಹೋಗಿದ್ರು, 2014 ರಲ್ಲಿ ಇದು ಡಿಸ್ಕ್ಷಸ್ ಆಗಿದೆ. ಎಲ್ಲ ವಾದ ವಿವಾದ ಕೇಳಿ ಟಿ.ಡಿ.ಆರ್ ಒಪ್ಪಿದ್ರು
ಈಗ ಲೇಟೆಸ್ಟ್ 10.12.24 ರಲ್ಲಿ ನೀವು ಹೀಗೆ ಡ್ರ್ಯಾಗ್ ಮಾಡ್ತಿದ್ದೀರಾ ಅಂತ ಹೇಳಿದ್ರು, ಟಿ.ಡಿ.ಆರ್ ವ್ಯಾಲ್ಯೂ ಅಂದು ಫಿಕ್ಸ್ ಆಗಿರಲಿಲ್ಲ. ಇವತ್ತು 3 ಸಾವಿರ ಕೋಟಿ ಬರತ್ತೆ ಅಂತ ಈಗ ಬೇರೆ ರೀತಿ ಮಾಡುತ್ತಿದ್ದಾರೆ. ಆವಾಗ್ಲೇ ನಮಗೆ ಟಿ.ಡಿ.ಆರ್ ಕೊಟ್ಟಿದ್ರೆ ಇಷ್ಟು ಅಮೌಂಟ್ ಆಗ್ತಿರಲಿಲ್ಲ. ಸ್ಟೇ.ಆರ್ಡರ್ ಇದೇ ನಾವೇ ಪೋಶಿಷನ್ ಅಲ್ಲಿದ್ದೇವೆ. ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಹೇಳಿಕೆ.
ಅರಮನೆ ಟಾರ್ಗೆಟ್ :
ಅರಮನೆ ಟಾರ್ಗೆಟ್ ಆಗ್ತಿದ್ಯಾ ಇಲ್ವಾ ನೀವೇ ಅರ್ಥ ಮಾಡ್ಕೊಳ್ಳಿ, ಮೈಸೂರಿನಲ್ಲಿ ಪ್ರಮೋದ ದೇವಿ ಒಡೆಯರ್ ಹೇಳಿಕೆ. ಮೈಸೂರು ಅರಮನೆ ಆಯ್ತು, ಚಾಮುಂಡಿ ಬೆಟ್ಟ ಪ್ರಾಧಿಕಾರ ಮಾಡಿದ್ದಾರೆ. ಆದ್ರೆ ಬೆಟ್ಟದ ಕುರಿತು ಕೇಸ್ ಇದೆ. ನಮ್ಮಿಂದ ಯಾರಿಗೂ ತೊಂದರೆ ಇಲ್ಲ. ನಮಗೆ ಯಾಕೆ ತೊಂದರೆ ಕೊಡುತ್ತಿದ್ದಾರೆ ಗೊತ್ತಿಲ್ಲ. ದ್ವೇಷ ಇದಿಯಾ ಇಲ್ವಾ ಅದು ಗೊತ್ತಿಲ್ಲ . ನಮ್ಮನ್ನೇ ಯಾಕೆ ಟಾರ್ಗೆಟ್ ಮಾಡ್ತಾರೆ ಅದು ಗೊತ್ತಿಲ್ಲ.
ಇದೆಲ್ಲ ಯಾರು ಮಾಡ್ತಿದ್ದಾರೆ ಅಂತ ನಿಮಗೆ ಗೊತ್ತು. ಅವರನ್ನೇ ಕೇಳಿ. ಸುಮಾರು ವರ್ಷಗಳಿಂದ ಟಾರ್ಗೆಟ್ ಮಾಡ್ತಿದ್ದಾರೆ. ಕಾರಣನಾನೇ ಇಲ್ಲದೆ ಟಾರ್ಗೆಟ್ ಆಗ್ತಿದ್ದೇವೆ. ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಹೇಳಿಕೆ.
ಕಾನೂನು ಹೋರಾಟ:
ಕಲೆದ 30 ವರ್ಷದಿಂದ ಕಾನೂನು ಸಮರ ಮಾಡಿದ್ದೇವೆ , ಮುಂದೇನು ಹೋರಾಟ ಮಾಡ್ತೀವಿ. ಅವರು ಒಂದು ಕಲ್ಲು ಎಸೆದ್ರೆ ನಾವು ಡಿಫೆಂಡ್ ಮಾಡ್ಕೋಬೇಕು. ಮಾಡ್ಕೋತಿವಿ. ಕಾನೂನು ಸಚಿವರಿಗೆ ಮಾಹಿತಿ ಕೊರತೆ ಇದಿಯಾ ಇಲ್ವಾ ಗೊತ್ತಿಲ್ಲ. ಕೋರ್ಟ್ ಆರ್ಡರ್ ಇದ್ರು ಟಿ.ಡಿ.ಆರ್ ಕೊಡಬೇಕು ಅಂತ ಆರ್ಡರ್ ಇದ್ರು ಈ ರೀತಿ ಮಾಡ್ತಿದ್ದಾರೆ.
key words: We are the owners, The Bangalore Palace land, Pramoda Devi Wodeyar, challenged the ordinance.
SUMMARY:
We are the owner of The Bangalore Palace land: Pramoda Devi Wodeyar who challenged the ordinance.