ಬೆಂಗಳೂರು,ಮಾರ್ಚ್,3,2023(www.justkannada.in): ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮುಖ್ಯನ್ಯಾಯಮೂರ್ತಿ ಬಿಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್, ಪ್ರಶಾಂತ್ ಕಚೇರಿಯಲ್ಲಿ 2 ಕೋಟಿ 2 ಲಕ್ಷ ರೂ ಹಾಗೂ ನಿವಾಸದಲ್ಲಿ 6.10 ಕೋಟಿ ನಗದು ಪತ್ತೆಯಾಗಿದೆ. ಪ್ರಕರಣದಲ್ಲಿ ಒಟ್ಟು 5 ಜನರನ್ನ ಈಗಾಗಲೇ ಬಂಧಿಸಿದ್ದೇವೆ. ಪ್ರಶಾಂತ್ ಹಾಗೂ ಅಕೌಂಟೆಂಟ್ ಬಂಧಿಸಿದ್ದೇವೆ. ಲಂಚ ನೀಡಲು ಬಂದಿದ್ದ ಮೂವರ ಬಂಧನವೂ ಆಗಿದೆ ಎಂದರು.
ಅಧಿಕಾರಿಗಳಾಗಲಿ ಶಾಸಕರಾಗಲಿ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ. ಕಾನೂನಿನ ಪ್ರಕಾರ ಎಲ್ಲರು ಒಂದೇ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರವೇ ಎಲ್ಲರಿಗೂ ತನಿಖೆಯಾಗುತ್ತದೆ ಎಂದರು.
Key words: Prashanth Madal –detection-8crore- Lokayukta CJ-BS Patil