ಮೈಸೂರು,ಫೆಬ್ರವರಿ,24,2025 (www.justkannada.in): ಫೆಬ್ರವರಿ 10 ರಂದು ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು ಆ ಘಟನೆಗೆ ಸಂಬಂಧಿಸಿದಂತೆ ಆರ್.ಅಶೋಕ್ ಜೊತೆ ನಾನು ಹೋಗಿದ್ದೆ. ನಾವು ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಅದಕ್ಕೆ ನನ್ನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ವರುಣಾ, ಶಿಗ್ಗಾವಿ, ಬಸವೇಶ್ವರನಗರ, ಮಾಗಡಿ ಸೇರಿದಂತೆ ಎಲ್ಲಾ ಕಡೆ ನನ್ನ ವಿರುದ್ದ ಎಫ್ ಐ ಆರ್ ಆಗ್ತಿದೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ ಮಾಡುತ್ತಿದ್ದಾರೆ. ನಾವು ಯಾರಿಗೂ ಕೂಡ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಒಬ್ಬ ಮುಸ್ಲೀಂ ಮುಖಂಡನೊಬ್ಬ ಪ್ರಚೋದನಾಕಾರಿ ಭಾಷಣ ಮಾಡಿದ್ದ. ಪುರುಸೋತ್ತಿಲ್ಲದೆ ಮಕ್ಕಳು ಹುಟ್ಟಿಸುತ್ತಿದ್ದಾರೆ. ಒಂದೇ ಮಕ್ಕಳು, ಎರಡೇ ಮಕ್ಕಳು ಇರುವವರನ್ನ ತೋರಿಸಿ ಎಂದು ಹರಿಹಾಯ್ದರು.
ಸೈಫ್ ಅಲಿಖಾನ್ ಗೆ ನಾಲ್ಕು ಮಕ್ಕಳಿದ್ದಾರೆ. ಜನೋತ್ಪಾದನೆ ಅವರಿಂದ ಸೃಷ್ಠಿ ಆಗುತ್ತಿದೆ ಎಂದಾದ ಮೇಲೆ ಹೇಳಿದ್ದು ತಪ್ಪೇನಿದೆ. ಎಲ್ಲವನ್ನೂ ದೇವರು ಕೊಟ್ಟ, ದೇವರೆ ನೋಡಿಕೊಳ್ಳಲಿ ಅಂತೀರಿ. ಹಾಗಾದರೆ ಸರ್ಕಾರದ ಹಣ ಯಾಕೆ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
1947 ರಲ್ಲಿ ಭಾರತದಲ್ಲಿ ಮುಸ್ಲಿಂ ಸಂಖ್ಯೆ ಎಷ್ಟಿತ್ತು? ಈಗ ಮುಸ್ಲೀಮರ ಸಂಖ್ಯೆ ಎಷ್ಟಿದೆ? ಬಾಂಗ್ಲಾ, ಪಾಕ್ ನಲ್ಲಿ ಎಷ್ಟಿದ್ದಾರೆ? ಸತ್ಯ ಹೇಳಿದ್ದಕ್ಕೆ ಕೇಸ್ ಹಾಕಿದ್ದಾರೆ. ಸಿಎಂ ವಿರುದ್ಧ ನಾನೊಬ್ಬನೇ ದನಿ ಎತ್ತುತ್ತೀನಿ ಆ ಕಾರಣಕ್ಕೆ ನಾನು ಟಾರ್ಗೆಟ್ ಆಗಿದ್ದೀನಿ ಎಂದು ಪ್ರತಾಪ್ ಸಿಂಹ ಹೇಳಿದರು.
Key words: case, FIR, truth, Pratap Simha, Mysore