ನವದೆಹಲಿ,ಜು,11,2019(www.justkannada.in): ಮಡಿಕೇರಿಯಲ್ಲಿ ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.
ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಡಿಕೇರಿಯಲ್ಲಿ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಮತದಾರರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಇಂದು ಸಚಿವರಾದ ಸದಾನಂದ ಗೌಡ ಪಿಯುಷ್ ಘೋಯಲ್, ಶಾಸಕ ಅಪ್ಪಚ್ಚುರಂಜನ್ ಹಾಗೂ ಸಂಸದ ತೇಜಸ್ವಿ ಸೂರ್ಯ , ಪ್ರತಾಪ್ ಸಿಂಹ ನಿಯೋಗ ಇಂದು ಕೇಂದ್ರ ಆರೋಗ್ಯ ಖಾತೆ ಸಚಿವ ಡಾ.ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಮಡಿಕೇರಿಯಲ್ಲಿ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವ ಸಂಬಂಧವಾಗಿ ಮನವಿ ಮಾಡಿದರು.
Key words: Pratap simha-appealed – Union Minister – open -emergency hospital – Madikeri