ಮೈಸೂರು,ಡಿಸೆಂಬರ್,26,2024 (www.justkannada.in): ಮೈಸೂರಿನ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಡಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರತಾಪ್ ಸಿಂಹ ಹತ್ತು ವರ್ಷಗಳ ಬಳಿಕ ನಿಜ ಹೇಳಿದ್ದಾರೆ. ಪ್ರತಾಪ್ ಸಿಂಹ ಎಲ್ಲಾದರೂ ಸಿಕ್ಕಿದರೆ ಕಾಫಿ ಕೊಡಿಸುತ್ತೇನೆ. ನಿಜ ಹೇಳಿರುವ ಪ್ರತಾಪ್ ಸಿಂಹಗೆ ಅಭಿನಂದನೆ ಸಲ್ಲಿಸುತ್ತೇನೆ ಅಷ್ಟೇ. ಅವರ ಜೊತೆ ಕಾಫಿ ಕುಡಿಯುವುದಕ್ಕೆ ಮಾತ್ರ ಸೀಮಿತವಾಗುತ್ತೇನೆ. ಅವರು ರೈಟಿಸ್ಟ್ ನಿನ್ನೆ ಆ ರೀತಿ ಹೇಳಿದ್ದಾರೆ, ಇಂದು ನಾಳೆ ಇನ್ನೇನು ಹೇಳ್ತಾರೋ ಗೊತ್ತಿಲ್ಲ ಎಂದು ಎಂ.ಲಕ್ಷ್ಮಣ್ ನುಡಿದರು
ಸಿಎಂ ಸಿದ್ದರಾಮಯ್ಯ ರಸ್ತೆ ನಾಮಕರಣ ಚರ್ಚೆ ವಿಚಾರ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ರಾಜ್ಯ, ದೇಶ ವಿದೇಶದಲ್ಲಿ ಚರ್ಚೆ ಆಗುತ್ತಿದೆ. ಇದು ವ್ಯವಸ್ಥೆಯ ದುರ್ದೈವ. 2.1 ಕಿಲೋ ಮೀಟರ್ ರಸ್ತೆಗೆ ನಾಮಕರಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶಾಸಕ ಹರೀಶ್ ಗೌಡ ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಕ್ಷೇತ್ರದ ಜನ ಸಾಮಾನ್ಯರಿಂದ ರಸ್ತೆ ನಾಮಕರಣಕ್ಕೆ ಮನವಿ ಹೋಗಿದೆ. ಈ ರಸ್ತೆಯಲ್ಲಿ 10 ಆಸ್ಪತ್ರೆಗಳು ನಿರ್ಮಾಣ ಆಗಿದೆ. 1569 ಕೋಟಿ ರೂಪಾಯಿಯನ್ನ ಆಸ್ಪತ್ರೆ ನಿರ್ಮಾಣಕ್ಕೆ ಕೊಟ್ಟಿದ್ದಾರೆ. ಜಯದೇವ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಜಿಲ್ಲಾ ಆಸ್ಪತ್ರೆ, ಹೈಟೆಕ್ ಪಂಚಕರ್ಮ ಆಸ್ಪತ್ರೆ, ಚರಕ ಆಸ್ಪತ್ರೆ ಸೇರಿ ಹಲವಾರು ಆಸ್ಪತ್ರೆಗಳು ಸ್ಥಾಪನೆಯಾಗಿವೆ. ಈಗ ಕಿದ್ವಾಯಿ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಮೈಸೂರಿಗೆ ನಿಮಾನ್ಸ್ ಘೋಷಣೆ ಮಾಡಿದ್ದಾರೆ. ಇವೆಲ್ಲವೂ ಅದೇ ರಸ್ತೆಯಲ್ಲೇ ನಿರ್ಮಾಣವಾಗಿವೆ. ಹೀಗಾಗಿ ಸಿದ್ದರಾಮಯ್ಯ ಹೆಸರು ಇತಿಹಾಸದ ಪುಟದಲ್ಲಿ ಇರಬೇಕೆಂದು ಜನರ ಮನವಿಯಾಗಿದೆ ಎಂದರು.
ಪ್ರತಾಪಸಿಂಹಗೆ ಅಭಿನಂದನೆ ಸಲ್ಲಿಸಿದ ಎಂ ಲಕ್ಷ್ಮಣ್, ಅವರು ಸಿಕ್ಕರೆ ನಾನೇ ಕರೆದುಕೊಂಡು ಹೋಗಿ ಕಾಫಿ ಕುಡಿಸುತ್ತೇನೆ. ಅವರು ಸಿದ್ದರಾಮಯ್ಯ ಹೊಗಳಿರುವುದಕ್ಕಲ್ಲ. ಪ್ರತಾಪಸಿಂಹ ಅವರಿಗೆ ಟಿಕೆಟ್ ತಪ್ಪಿದ ಮೇಲೆ ಜ್ಞಾನೋದಯವಾಗಿದೆ. ಬಿಜೆಪಿಯ ಹಿಡನ್ ಅಜೆಂಡಾ ಗೊತ್ತಾಗಿದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಕೆಲವರು ಸ್ಯಾಡಿಸ್ಟ್ ಆಗಿ ಬಿಹೇವ್ ಮಾಡುತ್ತಿದ್ದಾರೆ. ಬಿಜೆಪಿ ಯೋಗ್ಯತೆಗೆ 5 ಸಿಎಂ ಆಗಿದ್ದರು ನಿಮ್ಮ ಕೊಡುಗೆ ಏನು ಬೊಗಳಿ. ಮೈಸೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ? ನಿಮಗೆ ನಾಚಿಕೆ ಆಗಬೇಕು. ನಿಮಗೆ ಮಾನ ಮರ್ಯಾದೆ ಇದ್ದರೆ ಉತ್ತರ ಕೊಡಿ ಎಂದು ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಬೋಳ ಗ್ರಾಮದಲ್ಲಿ ನಾಥುರಾಮ್ ಗೋಡ್ಸೆ ಹೆಸರು ಇಟ್ಟಿದ್ದಾರೆ. ನಿಮ್ಮ ಆರಾಧ್ಯ ದೈವದ ಹೆಸರು ಇಟ್ಟಿದ್ದೀರಾ ಯಾರು ಆತ ?. ಯಡಿಯೂರಪ್ಪ ಹೆಸರು ಇಟ್ಟಿದ್ದೀರಾ ಅವರು ಪೋಕ್ಸೋ ಆರೋಪಿ ಜೈಲಿನಲ್ಲಿದ್ದವರು. ಅಮಿತ್ ಶಾ ಮೋದಿ ಹೆಸರು ಇಟ್ಟಿದ್ದೀರಾ ಇದಕ್ಕೆ ಉತ್ತರ ಕೊಡಿ. ಒಂದು ಲಕ್ಷ ಜನ ಸಿದ್ದರಾಮಯ್ಯ ಪರ ಪತ್ರ ಬರೆಯುತ್ತಾರೆ. ಹೆಸರಿಡಲು ಪಾಲಿಕೆ ಸಿಎಂ ಸಿದ್ದರಾಮಯ್ಯ ಅನುಮತಿ ಪಡೆಯಬೇಕು ಎಂದು ಎಂ. ಲಕ್ಷ್ಮಣ್ ತಿಳಿಸಿದರು.
ಸಿ.ಟಿ ರವಿ ಮೂಲಕ ವಿಜಯೇಂದ್ತ ತೆಗೆಯಲು ಹುನ್ನಾರ
ಇದೇ ವೇಳೆ ಎಂಎಲ್ ಸಿ ಸಿಟಿ ಪ್ರಕರಣ ಕುರಿತು ಮಾತನಾಡಿದ ಎಂ.ಲಕ್ಷ್ಮಣ್, ಸಿ.ಟಿ ರವಿಗೆ ಮಾನ ಮರ್ಯಾದೆ ಇದೆಯಾ ? ಸಿ.ಟಿ ರವಿ ಮೂಲಕ ವಿಜಯೇಂದ್ತ ತೆಗೆಯಲು ಹುನ್ನಾರ ನಡೆಯುತ್ತಿಎ. ಜನವರಿ ವೇಳೆಗೆ ವಿಜಯೇಂದ್ರ ಬದಲಾವಣೆಯಾಗಲಿದ್ದಾರೆ ಎಂದು ಹೊಸಬಾಂಬ್ ಸಿಡಿಸಿದರು.
ಪ್ರಹ್ಲಾದ್ ಜೋಶಿ ಒಬ್ಬ ಜೋಕರ್ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾರೆ. ಗಾಂಧೀಜಿಯನ್ನು ನಕಲಿ ಗಾಂಧಿ ಅಂತಿಯಾರಾ ಮಾನ ಮರ್ಯಾದೆ ಇಲ್ಲವಾ ? ನಿನಗೆ ನಾಚಿಕೆ ಇಲ್ಲವಾ? ಜನ ನಿನ್ನ ಮಾತಿಗೆ ಅಸಹ್ಯ ಪಡುತ್ತಿದ್ದಾರೆ. ಅಶಾಂತಿ ಸೃಷ್ಠಿ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.
ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ನೂರಕ್ಕೆ ನೂರು ಸಮಾವೇಶ ಮುಗಿದ ಮೇಲೆ ಹಳ್ಳಿ ಹಳ್ಳಿಗೆ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಇದೇ ವೇಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದವೂ ಗುಡುಗಿದ ಎಂ.ಲಕ್ಷ್ಮಣ್, ಎಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ? ನಿಮ್ಮ ಜಾತಿ ಹೆಣ್ಣು ಮಗಳಿಗೆ ಈ ರೀತಿ ಪದ ಬಳಸಿದ್ದಾರೆ. ಏಕೆ ಬಾಯಿ ಮುಚ್ಚಿಕೊಂಡು ಕುಳುತಿದ್ದೀರಾ ? ವೀರಶೈವ ಲಿಂಗಾಯತ ಎಂತಹ ದೊಡ್ಡ ಸಮುದಾಯ ಏಕೆ ಸುಮ್ಮನಿದ್ದಾರೆ ? ಹೇಳಿಲ್ಲ ಅಂದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ. ಲಕ್ಷ್ಮಿ ಹೆಬ್ಬಾಳ್ಕರ್ ಯಾವುದೇ ಕಾರಣಕ್ಕೂ ಇದನ್ನು ಬಿಡುವುದಿಲ್ಲ ಎಂದರು.
Key words: Pratap Simha, truth, after, 10 years, M. Laxman