ಮೈಸೂರು,ಫೆಬ್ರವರಿ,11,2025 (www.justkannada.in): ಮೈಸೂರಿನ ಉದಯಗಿರಿ ಪೋಲಿಸ್ ಠಾಣೆ ಬಳಿ ನಿನ್ನೆ ನಡೆದ ಕಲ್ಲು ತೂರಾಟದ ಘಟನೆಯನ್ನ ಮಾಜಿ ಸಂಸದ ಪ್ರತಾಪ್ ಸಿಂಹ ಖಂಡಿಸಿದ್ದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ನಿನ್ನೆ ಮುಸ್ಲೀಂ ಸಮುದಾಯದ ಪ್ರತಿಭಟನಾಕಾರರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದಾರೆ. ಮೈಸೂರಿನಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ ನಿನ್ನೆ ನಡೆದಿದೆ. ಪೊಲೀಸರನ್ನೆ ಗುರಿಯಾಗಿಸಿ ಇಲ್ಲಿ ಯಾವಾಗಲೂ ದಾಳಿ ಆಗುತ್ತದೆ. ಈಗಲೂ ಅದೇ ಮುಂದುವರಿದಿದೆ. ಸಿದ್ದರಾಮಯ್ಯ ಆಡಳಿತ ಹೇಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಅವರದ್ದು, ಕನ್ನಡಿಗರ ಸರಕಾರ ಅಲ್ಲ. ಇದು ತಾಲಿಬಾನಿ ಸರಕಾರ ಎಂದು ವಾಗ್ದಾಳಿ ನಡೆಸಿದರು.
ಪೊಲೀಸರು ಆಳುವ ಸರಕಾರದ ಅಣತಿಯಂತೆ ನಡೆಯುವುದನ್ನು ಮೊದಲು ಬಿಡಬೇಕು. ಅರವಿಂದ್ ಕೇಜ್ರಿವಾಲ್ ಸೋತರೆ ಉದಯಗಿರಿ ಮುಸಲ್ಮಾನರಿಗೆ ಯಾಕೆ ರೋಷ ಬರುತ್ತದೆ? ಅವರ ಮನೆಯಲ್ಲಿ ಯಾಕೆ ಸೂತಕ ಬರುತ್ತೆ? ಉದಯಗಿರಿ ವ್ಯಾಪ್ತಿಯಲ್ಲಿ ಪೊಲೀಸರು ಕೂಬಿಂಗ್ ಮಾಡಬೇಕು. ಸಿದ್ದರಾಮಯ್ಯ ಅವರು ಎಷ್ಟು ದಿನ ಸಿಎಂ ಆಗಿ ಇರುತ್ತಿರಾ ಗೊತ್ತಿಲ್ಲ. ಈಗಲಾದರೂ ಖಡಕ್ ಆಗಿ ಕೆಲಸ ಮಾಡಲಿ. ಸಿದ್ದರಾಮಯ್ಯ ಎಷ್ಟು ಅಸಮರ್ಥ ಸಿಎಂ ಎಂಬುದಕ್ಕೆ ಅವರ ತವರೂರಿನಲ್ಲಿ ನಡೆದ ಈ ಘಟನೆ ಸಾಕ್ಷಿ ಎಂದು ಕಿಡಿಕಾರಿದರು.
ಒಂದು ವಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ.
ಈಗಲೂ ಒಂದು ವಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ಸಿದ್ದರಾಮಯ್ಯ ಅವರೇ ನಿಮ್ಮ ಕೈಯಲ್ಲಂತೂ ಆಗುವುದಿಲ್ಲ. ಪೊಲೀಸರಿಗಾದರೂ ಅವಕಾಶ ಮಾಡಿಕೊಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದರು.
Key words: mysore, police station, stone-pelting, Prathap Simha