ಬೆಂಗಳೂರು,ಜುಲೈ,28,2022(www.justkannada.in): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೇಕ ಮತಾಂಧ ಸಂಘಟನೆಗಳ ಮೇಲೆ ಅನುಮಾನವಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಕರಣ ಸಂಬಂಧ ಈಗಾಗಲೇ 15 ಜನರನ್ನ ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ. ಕೇರಳ ಪೊಲೀಸರ ಜೊತೆಗೆ ಚರ್ಚೆ ನಡೆಸಲಾಗುತ್ತಿದೆ. ಇಬ್ಬರೂ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ರೆ ಯಶಸ್ವಿಯಾಗುತ್ತದೆ. ಆನೇಕ ಮತಾಂಧ ಸಂಘಟನೆಗಳ ಮೇಲೆ ಅನುಮಾನವಿದೆ ಎಂದಿದ್ದಾರೆ.
ಇನ್ನುಬಿಜೆಪಿ ಕಾರ್ಯಕರ್ತರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಸಚಿವ ಅರಗ ಜ್ಞಾನೇಂದ್ರ, ಆಕ್ರೋಶ ಇದ್ದಿದ್ದಕ್ಕೆ ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದಾರೆ. ನಾವು ಅಸಹಾಯಕರಲ್ಲ ನಮ್ಮ ಸರ್ಕಾರ ಅಸಹಾಯಕವಲ್ಲ. ನಾವು ಎಲ್ಲಾ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.
Key words: Praveen Nettaru- murder –case-suspected-Home Minister Araga jnanendra.