ಮೈಸೂರು,ನ,29,2019(www.justkannada.in): ಮೈಸೂರಿನ ಕುವೆಂಪು ನಗರದ ವಿವೇಕಾನಂದ ವೃತ್ತದ ಬಳಿ ಶ್ರೀ ಪಾದ ಶಿಲೆ ಉದ್ಯಾನದ ಬಳಿ ಇರುವ ಬೃಹತ್ ಶ್ರೀಗಂಧದ ಮರವೊಂದು ಇಂದು ಕಳ್ಳರ ಪಾಲಾಗಲಿದೆ.
ಶ್ರೀಗಂಧದ ಮರವನ್ನು ಕತ್ತರಿಸಿ ಹೊತ್ತೊಯ್ಯಲು ಅನುಕೂಲವಾಗುವಂತೆ ಕಳ್ಳರು ಗರಗಸದಿಂದ ಕುಯ್ದು ಸಿದ್ಧಪಡಿಸಿದ್ದಾರೆ. ಹೀಗಾಗಿ ಈ ಶ್ರೀಗಂಧದ ಮರ ಚೋರರ ಪಾಲಾಗುವ ಮುನ್ನ ಕುವೆಂಪು ನಗರ ಪೊಲೀಸರು ಹಾಗೂ ಅರಣ್ಯ ಇಲಾಖೆಯು ಎಚ್ಚೆತ್ತು ಈ ಶ್ರೀಗಂಧದ ಮರವನ್ನು ಕಾಪಾಡಬೇಕಾಗಿದೆ.
ಅಥವಾ ಅರಣ್ಯ ಇಲಾಖೆಯವರೇ ಈ ಶ್ರೀಗಂಧದ ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಿ ಕಳ್ಳತನಕ್ಕೆ ಬ್ರೇಕ್ ಹಾಕಲಿ ಎಂಬ ಆಗ್ರಹ ಕೇಳಿ ಬಂದಿದೆ.
ಕೃಪೆ
-ಪಿ.ಜೆ.ರಾಘವೇಂದ್ರ.
ನ್ಯಾಯವಾದಿ, ಮೈಸೂರು.
key words: preparation -sandalwood tree-theft – Mysore