ಬೆಂಗಳೂರು,ಜನವರಿ,18,2021(www.justkannada.in): ಸಂಕ್ರಾಂತಿ ನಂತರ ಪಕ್ಷದ ಪುನಶ್ಚೇತನಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು,32 ಪ್ರಮುಖ ನಾಯಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಕ್ಷ ಸಂಘಟನೆಗೆ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಪಕ್ಷ ಸಂಘಟನೆ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇಂದಿನ ಸಭೆಗೆ ವೈಎಸ್ವಿ ದತ್ತಾ ಕುಟುಂಬದವರಿಗೆ ಆರೋಗ್ಯ ಸಮಸ್ಯೆ ಕಾರಣ ಬಂದಿಲ್ಲ. ದೇವೇಂದ್ರ ಚೌಹಾಣ್ ಡಿಸಿಎಂ ಕಾರ್ಯಕ್ರಮ ಇರುವ ಕಾರಣ ಬಂದಿಲ್ಲ. ಏಳು ವಿಭಾಗಗಳಲ್ಲಿ ವೀಕ್ಷಕರ ಸಮಿತಿ ರಚನೆ ಮಾಡಲಾಗಿದೆ. ಹೈದರಾಬಾದ್-ಕರ್ನಾಟಕ ಭಾಗಕ್ಕೆ ಬಂಡೆಪ್ಪ ಕಾಶೆಂಪೂರ, ಮುಂಬೈ ಕರ್ನಾಟಕ ಬಸವರಾಜ ಹೊರಟ್ಟಿ, ಮಧ್ಯ ಕರ್ನಾಟಕಕ್ಕೆ ಶಿವಶಂಕರ್ ಸೇರಿ ಎಲ್ಲ ಭಾಗಗಳಲ್ಲೂ ಜವಾಬ್ದಾರಿ ನೀಡಲಾಗಿದೆ ಎಂದರು.
ಪಕ್ಷಕ್ಕೆ ಬದ್ಧತೆಯಿಂದ ದುಡಿಯುವರಿಗೆ ಅವಕಾಶ ನೀಡಲಾಗುತ್ತದೆ. ಎಲ್ಲ ಸಭೆ, ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿಯವರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾವು ಅತಿಹೆಚ್ಚು ಕಡೆ ಗೆದ್ದಿದ್ದೇವೆ ಅಂತಾರೆ. ವಾಸ್ತವಾಂಶ ಏನೆಂಬುದನ್ನು ನಾನು ಅರಿತಿದ್ದೇನೆ. ಅಮಿತ್ ಶಾ ಡಬಲ್ ಇಂಜಿನ್ ತರುತ್ತೇವೆ ಎಂದಿದ್ದಾರೆ. ಡಬಲ್ ಇಂಜಿನ್ ರಾಜ್ಯವನ್ನು ಹಾಳು ಮಾಡಿವೆ . ಬಿಜೆಪಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ನಾವು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
Key words: Preparing –jds-party -Formation -H. D. Kumaraswamy.