ಮೈಸೂರು,ಜೂ,3,2020(www.justkannada.in): ಶಾಲೆ ಪ್ರಾರಂಭದ ಬಗ್ಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಬಂದಿದೆ. ಎರಡು ಹಂತದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಡಿಡಿಪಿಐ ಪಾಂಡುರಂಗ ತಿಳಿಸಿದರು.
ಜುಲೈ1ರಿಂದ ಸರ್ಕಾರಿ ಶಾಲೆಗಳು ಪುನಾರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಡಿಪಿಐ ಪಾಂಡುರಂಗ, ರಾಜ್ಯದಲ್ಲಿ ಎರಡು ಹಂತದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. 4ರಿಂದ 7ನೇ ತರಗತಿಗೆ ಜುಲೈ 1ರಿಂದ ಹಾಗೂ 1ರಿಂದ 3, 8ರಿಂದ 10ನೇ ತರಗತಿಯನ್ನು ಜು.15 ಪ್ರಾರಂಭಿಸುವುದಕ್ಕೆ ಸಿದ್ದತೆ ನಡೆಸಲಾಗಿದೆ. ಜೂ.25ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಇರುವುದರಿಂದ ಪ್ರೌಢಶಾಲೆಗಳನ್ನು ಜು.15ರಿಂದ ಆರಂಭಿಸಲಾಗುತ್ತಿದೆ. ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಇಲಾಖೆ ಸೂಚನೆ ನೀಡಿದ್ದು, ಶಾಲೆಗಳ ಪುನರಾಭಕ್ಕೆ ಜೂನ್ 5ರಿಂದಲೇ ಸಿದ್ಧತೆ ಮಾಡಿಕೊಳ್ಳಲಿದ್ದೇವೆ. ಶಾಲೆಗಳ ಸ್ವಚ್ಚತೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಂದು ಮಾಹಿತಿ ನೀಡಿದರು.
ಜೂನ್ 8 ರಿಂದ ದಾಖಲಾತಿ ಪ್ರತಿಕ್ರಿಯೆ ಕೂಡ ಆರಂಭವಾಗಲಿದೆ. ಎಲ್ಲಾ ಶಾಲೆಗಳಲ್ಲಿ ಎಸ್ ಡಿ ಎಂಸಿ ಸಭೆ ಕರೆದು ಗ್ರಾಮಸ್ಥರು, ಪೋಷಕರ ಅಭಿಪ್ರಯ ಸಂಗ್ರಹ ಮಾಡುತ್ತೇವೆ. ಅಲ್ಲದೇ ಪ್ರತೀ ಗ್ರಾಮಗಳಲ್ಲಿ ಜಾಗೃತಿ ಜಾಥ ನಡೆಸಿ ದಾಖಲಾತಿ ಆಂದೋಲನ ಮಾಡುತ್ತೇವೆ. ಈ ಸಂಬಂಧ ಜಿಲ್ಲೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಲಾಗಿದೆ. ಶಾಲೆಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ವಾಗಿರುತ್ತದೆ. ಎಲ್ಲಾ ರೀತಿಯ ಸುರಕ್ಷತೆ ಕ್ರಮಗಳನ್ನು ಕೈಗೊಂಡು ಶಾಲೆ ಪ್ರಾರಂಭಿಸಲು ರೆಡಿ ಇದ್ದೇವೆ ಎಂದು ಪಾಡುರಂಗ ತಿಳಿಸಿದರು.
ಹಾಗೆಯೇ ಪಠ್ಯ ಹಾಗೂ ತರಗತಿ ನಡೆಸುವ ಬಗ್ಗೆ ಸರ್ಕಾರ ಮಾರ್ಗಸೂಚಿ ನೀಡಬೇಕಿದೆ. ಸರ್ಕಾರದಿಂದ ಸೂಕ್ತ ನಿರ್ದೇಶನ ಬಂದರೆ ತಕ್ಷಣದಿಂದಲೇ ಕಾರ್ಯೋನ್ಮುಖವಾಗಲು ಸಿದ್ದರಿದ್ದೇವೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಕೊಠಡಿ ಸಮಸ್ಯೆ ಇಲ್ಲ. ಸಾಮಾಜಿಕ ಅಂತರ ಪಾಲಿಸುವುದರಿಂದ ಹೆಚ್ಚಿನ ಕೊಠಡಿಗಳ ನಿರ್ಮಾಣಕ್ಕೆ ಕ್ರಮವಹಿಸಿದ್ದೇವೆ ಎಂದು ಡಿಡಿಪಿಐ ಪಾಡುರಂಗ ಹೇಳಿದರು.
Key words: Preparing -opening –schools-Mysore- DDPI- Panduranga