ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ

ಬೆಂಗಳೂರು,ಡಿಸೆಂಬರ್,12,2020(www.justkannada.in) : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ಹಾಗಾಗಿ, ನಗರದಲ್ಲಿ BMTC ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.logo-justkannada-mysoreಈ ನಡುವೆ, ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಮೆಜೆಸ್ಟಿಕ್ ಎರಡು ಬಿಎಂಟಿಸಿ ಬಸ್ ಗಳು ಸಹ ಆಗಮಿಸಿದೆ.

ಪೊಲೀಸ್ ಸಿಬ್ಬಂದಿಗೆ ಬಸ್ ನಿಲ್ದಾಣಗಳಲ್ಲಿ ಅಲರ್ಟ್ ಸೂಚನೆ

ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅಲರ್ಟ್ ಮೆಸೇಜ್ ಕಳುಹಿಸಲಾಗಿದ್ದು, ಬಸ್ ಸೇವೆಗೆ ಭದ್ರತೆ ಒದಗಿಸಲು ಸೂಚನೆ ನೀಡಲಾಗಿದೆ. ಜೊತೆಗೆ, ಕೆಲವು ಡಿಪೋಗಳಿಂದ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಬಸ್ ನಿಲ್ದಾಣಗಳಲ್ಲಿ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.

Preparing,BMTC,Bus,Traffic,Police,Security

ಸದ್ಯ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಶಿವಾಜಿನಗರ ಬಸ್ ನಿಲ್ದಾಣಕ್ಕೂ ಬಿಎಂಟಿಸಿ ಬಸ್ ಆಗಮಿಸುವ ಸಾಧ್ಯತೆಯಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 4 ವಾಯುವಜ್ರ ಬಸ್ ಗಳು

ಇತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಹ ನಾಲ್ಕು ವಾಯುವಜ್ರ ಬಸ್ ಗಳು ಆಗಮಿಸಿದೆ ಎಂದು ಹೇಳಲಾಗಿದೆ. ಪ್ರತಿನಿತ್ಯ 50 ಬಸ್ ಗಳು 340 ಟ್ರಿಪ್ ಸಂಚಾರ ಮಾಡ್ತಿದ್ದವು. ಆದರೆ, ಇಂದು 4 ಬಸ್ ಗಳು ಮಾತ್ರ KIAB ಗೆ ಆಗಮಿಸಿದೆ. 9 ಗಂಟೆ ನಂತರ ಎಲ್ಲ ಬಸ್ ಗಳ ಸಂಚಾರ ನಿಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Preparing-BMTC-Bus-Traffic-Police-Security

key words : Preparing-BMTC-Bus-Traffic-Police-Security