ಬೆಂಗಳೂರು,ಮೇ,14,2022(www.justkannada.in): ಐತಿಹಾಸಿಕ ದೊಡ್ಡ ಆಲದ ಮರದ ಸಂರಕ್ಷಣೆಗಾಗಿ ದೊಡ್ಡ ಆಲದ ಮರದ ಸಂರಕ್ಷಣಾ ಸಮಿತಿಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಚಿತ್ರಣವನ್ನು ಪರಾಮರ್ಶಿಸಿ ಸಲಹೆ – ಸೂಚನೆಗಳನ್ನು ನೀಡಿದ್ದಾರೆ.
ದೊಡ್ಡಾಲದ ಮರದ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ. ಎ.ಎನ್.ಯಲಪ್ಪ ರೆಡ್ಡಿ, ಬಟಾನಿಕಲ್ ಸರ್ವೆ ಆಫ್ ಇಂಡಿಯಾ ನಿರ್ದೇಶಕ ಡಾ.ಸಂಜಪ್ಪ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರೀಯ ವಿಭಾಗದ ಡೀನ್ ಮತ್ತು ಮುಖ್ಯಸ್ಥರಾದ ಡಾ.ಬಾಲಕೃಷ್ಣೇ ಸೇರಿದಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ. ಕೇತೋಹಳ್ಳಿ ಗ್ರಾಮಸ್ಥರು, ಪರಿಸರ ಪ್ರುತರು ಉಪಸ್ಥಿತರಿದ್ದರು. ತಜ್ಞರ ಸಮಿತಿಯು ದೊಡ್ಡಾಲದ ಮರವನ್ನ ಪರಿವೀಕ್ಷಿಸಿ ಅವಶ್ಯಕ ಸಲಹೆಗಳನ್ನು ಸೂಚನೆಗಳನ್ನ ನೀಡಿದರು.
400 ವರ್ಷಗಳಷ್ಟು ಹಳೆಯದಾದ ಬೆಂಗಳೂರಿನ ಐತಿಹಾಸಿಕ ದೊಡ್ಡ ಆಲದ ಮರ ದೇಶದ 6ನೇ ಅತೀ ದೊಡ್ಡ ಆಲದ ಮರವೆಂಬ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ದೊಡ್ಡ ಆಲದ ಮರದ ವಿಸ್ತೀರ್ಣ ಸುಮಾರು 3 ಎಕರೆ ಇವೆ. ದೊಡ್ಡ ಆಲದ ಮರದಲ್ಲಿ ಒಟ್ಟು 1,359 ಬೀಳಲು ಬೇರುಗಳಿದ್ದು, ಈ ಪೈಕಿ 811 ಸಂಖ್ಯೆಯ ಬೀಳಲು ಬೇರುಗಳು ನೆಲಕ್ಕೆ ಬೇರು ಕೊಟ್ಟಿವೆ. ಉಳಿದ 548 ಸಂಖ್ಯೆಯ ಬೀಳಲು ಬೇರುಗಳು ನೆಲದಿಂದ 10-20 ಅಡಿ ಎತ್ತರದಲ್ಲಿ, ತೂಗುತ್ತಿವೆ.
ಇನ್ನು ಬಿದ್ದ ಭಾರಿ ಮಳೆ-ಗಾಳಿಯಿಂದಾಗಿ ದೊಡ್ಡಾಲದ ಮರದ ಒಂದು ಬೀಳಲು ಬೇರು ಸಮೂಹ ಬಿದ್ದು ಹೋಗಿದ್ದು, ಇದನ್ನ ಸಮಿತಿಯ ತಜ್ಞರು ಅಧಿಕಾರಿಗಳು, ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲಿಸಿ ವೈಜ್ಞಾನಿಕ ಅಂಶಗಳನ್ನು ತಿಳಿಸಿದ್ದಾರೆ. ಪ್ರಸ್ತುತ ಉರುಳಿ ಬಿದ್ದಿರುವ ಬೀಳಲು ಬೇರುಗಳ ಸಮೂಹ ಭಾರಿ ಮಳೆ ಗಾಳಿಯಿಂದ ಎಂದು ಸ್ಪಷ್ಟ ಪಡಿಸಿದ್ದು, ಈ ಬಗ್ಗೆ ಬೇರೆ ವದಂತಿಗಳನ್ನು ತಳ್ಳಿ ಹಾಕಿದೆ.
ಹಾಲಿ ಉರುಳಿ ಬಿದ್ದಿರುವ ಬೀಳಲು ಬೇರುಗಳ ಕಾಂಡ ಸಮೂಹ ಪಕ್ಕದ ಬೇರು ಸಮೂಹಕ್ಕೆ ಹಾನಿ ಮಾಡುವುದನ್ನು ತಪ್ಪಿಸಲು ಬಿದ್ದಿರುವ ಬೇರು ಸಮೂಹವನ್ನು ತ್ವರಿತವಾಗಿ ಕತ್ತರಿಸಿ ತೆರವುಗೊಳಿಸುವಂತೆ ತಜ್ಞರು ಸಲಹೆ ನೀಡಿದರು.
Key words: Preservation – large- banyan tree- Visit -conservation committee –experts