ಸಾಧಕರಿಗೆ ರಾಷ್ಟ್ರಪತಿಗಳಿಂದ ಪದ್ಮ ಪ್ರಶಸ್ತಿ ಪ್ರದಾನ.

ನವದೆಹಲಿ,ನವೆಂಬರ್,8,2021(www.justkannada.in):  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಇಂದು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು. ಈ ವರ್ಷ 119 ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಲ್ಲಿ 7 ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 102 ಪದ್ಮಶ್ರೀ ಪ್ರಶಸ್ತಿಗಳು ಇವೆ.

ರಾಜ್ಯದಿಂದ ಸಮಾಜಸೇವಕ ಅಕ್ಷರ ಸಂತ ಹರೇಕಳ ಹಾಜಬ್ಬಿ, ಪರಸರಪ್ರೇಮಿ  ತುಳಸಿ ಗೋವಿಂದೇಗೌಡರಿಗೆ ಹಾಗೂ ಮಾಜಿ ಹಾಕಿಪಟು ಎಂಪಿ ಪ್ರಕಾಶ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಒಲಿಂಪಿಯನ್ ಪಿವಿ ಸಿಂಧು, ನಟಿ ಕಂಗನಾ ರಣಾವತ್ ಸೇರಿದಂತೆ ಪ್ರಮುಖರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು. ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರಗೃಹ ಸಚಿವ ಅಮಿತ್ ಶಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Key words: President – Padma Award – Achievers- Padma Shri award – four in state

ENGLISH SUMMARY…

President bestows Padma Award on achievers

New Delhi, November 8, 2021 (www.justkannada.in): Hon’ble President of India Ram Nath Kovind today gave a Padma Awards to several achievers.

The program was held at the Rashtrapathi Bhavan. A total number of 119 people won the Padma awards this year, which includes 7 Padmavibhushan, 10 Padmabhushan, and 102 Padmashri awards.

Padmashri award winners of Karnataka
• Harakela Hajabbi, Social worker
• Tulasi Govindegowda, Environmentalist
• M.P. Prakash, former Hockey player

Padma awards were also given to former Union External Affairs Minister Sushma Swaraj, Olympian P.V. Sindhu, actor Kangana Ranaut. Sushma Swaraj was bestowed with the Padmabhushan award posthumously. Her daughter Bansuri Swaraj received the award from the Hon’ble President Ram Nath Kovind.

Prime Minister Narendra Modi, Union Home Minister Amit Shah and other dignitaries were present.

 

Keywords: Padma awards/ New Delhi/ Hon’ble President