ಮೈಸೂರು,ಅ,11,2019(www.justkannada.in): ನಿನ್ನೆಯಿಂದ ಎರಡು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದ ರಾಷ್ಟ್ರಪತಿ ರಮನಾಥ್ ಕೋವಿಂದ ಅವರು ಇಂದು ವರುಣ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿಯ ನೂತನ ಸಮುಚ್ಚಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.
ಮೈಸೂರು ತಾಲ್ಲೂಕಿನ ವರುಣಾ ಗ್ರಾಮದಲ್ಲಿ 101 ಎಕರೆಯಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ನಿರ್ಮಾಣವಾಗುತ್ತಿದೆ. ಇಂದು ನೂತನ ಕಟ್ಟಡದ ಶಿಲನ್ಯಾಸ ಹಾಗೂ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 104ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಪತಿ ಡಾ. ರಮಾನಾಥ್ ಕೋವಿಂದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಸಮಚ್ಚಯದ ಶಿಲಾನ್ಯಾಸ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲಲ್ಲಿ ರಾಜ್ಯಪಾಲ ವಜುಬಾಯಿ ವಾಲಾ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿ, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಜೀ, ಕೇಂದ್ರ ಸಚಿವ ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು. ಹಾಗೆಯೇ ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ರಾಮನಾಥ್ ಕೋವಿಂದ್ ಹಾಗೂ ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ವಿದ್ಯಾಕ್ಷೇತ್ರಕ್ಕೆ ಸುತ್ತೂರು ಶ್ರೀಗಳ ಕೊಡುಗೆ ಅಪಾರ. ಅದರಲ್ಲೂ ಕರ್ನಾಟಕ ವಿದ್ಯಾರ್ಜನಾ ಬೆಳವಣಿಗೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ. ಜತೆಗೆ ಮೈಸೂರು ಪ್ರಾಂತ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಶಿಕ್ಷಣ, ತಾಂತ್ರಿಕ ಪ್ರಗತಿಗೆ ಶ್ರೀಗಳು ಅಪಾರ ಕೊಡುಗೆ ನೀಡಿದ್ದಾರೆ. ಉನ್ನತ ಮಟ್ಟದ ಶಿಕ್ಷಣಕ್ಕೆ ಇವರ ಕಾಳಜಿ ಇಂದಿಗೂ ಮಾದರಿ ಎಂದು ಸುತ್ತೂರು ಶ್ರೀಗಳ ಸಾಧನೆಯನ್ನ ಕೊಂಡಾಡಿದರು.
ಪರಿಸರ ಕಾಳಜಿ ಮೆರೆಯುತ್ತಿರುವ ಸುತ್ತೂರು ಶ್ರೀಗಳು ಹಸಿರು ಕ್ಯಾಂಪಸ್ ನಿರ್ಮಾಣ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ರಾಷ್ಟ್ರಪತಿ ರಮನಾಥ್ ಕೋವಿಂದ ತಿಳಿಸಿದರು.
ಶಿಕ್ಷಣಕ್ಕೆ ಮಠಮಾನ್ಯಗಳು ಹೆಚ್ಚಿನ ಹೊತ್ತು ಕೊಡುತ್ತಿರುವುದು ಸಂತಸ- ರಾಜ್ಯಪಾಲ ವಜುಭಾಯಿ ವಾಲಾ ಶ್ಲಾಘನೆ…
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು, ದೇಶ ಹಣ ಆಸ್ತಿಯಲ್ಲಿ ಎಷ್ಟು ಶ್ರೀಮಂತ ಅನ್ನೋದು ಮುಖ್ಯ ಅಲ್ಲ. ಜ್ಞಾನದಲ್ಲಿ ಶ್ರೀಮಂತರಾಗಿದ್ದಿವಾ ಅನ್ನೋದು ಮುಖ್ಯ. ನಮ್ಮ ದೇಶದಲ್ಲಿ ಭಗವಂತನ ಮಂದಿರಗಳು ಬೇಕಾದಷ್ಟಿವೆ. ಆದರೆ ವಿದ್ಯಾಮಂದಿರಗಳಿಲ್ಲ. ದೇಶದಲ್ಲಿ ಇವತ್ತಿಗೂ ಕೂಡ ಅನಕ್ಷರತೆ ಇದೆ. ಶೇಕಡಾ ನೂರರಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಲು ವಿದ್ಯಾಸಂಸ್ಥೆಗಳ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಶಿಕ್ಷಣಕ್ಕೆ ಮಠಮಾನ್ಯಗಳು ಹೆಚ್ಚಿನ ಹೊತ್ತು ಕೊಡುತ್ತಿರುವುದು ಸಂತಸದ ವಿಚಾರ. ನಿಮ್ಮ ಸಂಪಾದನೆಯಲ್ಲಿ ಶೇ 10 ರಷ್ಟನ್ನು ಮಠಮಾನ್ಯಗಳಿಗೆ ಕೊಡಿ. ಆ ಮೂಲಕ ಶಿಕ್ಷಣ ನೀಡಲು ಸಹಕಾರಿಯಾಗಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಕರೆ ನೀಡಿದರು.
ಭಾರತ್ ಮಾತಾಕಿ ಎನ್ನುವ ಜೋಶ್ ಹೆಚ್ಚಿಗೆ ಇದ್ದಷ್ಟು ನೀವು ಸದೃಢವಾಗಿರುತ್ತೀರಿ. ಹೃದಯದಿಂದ ಭಾರತ್ ಮಾತೆಗೆ ಜೈಕಾರ ಹೇಳಬೇಕು. ಆಗ ನಮಗೆ ಭಾರತ ಮಾತೆಯ ಆಶೀರ್ವಾದ ಇರುತ್ತದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ವಿದ್ಯಾರ್ಥಿಗಳಿಂದ ಭಾರತ್ ಮಾತೆಗೆ ಜೈಕಾರ ಕೂಗಿಸಿದರು.
Key words: President- Ramanath Kovind- inauguration- JSS Academy – Higher Education- Building