ನವದೆಹಲಿ,ಜೂ,20,2019(www.justkannada.in): 2022ರ ವೇಳೆಗೆ ನವಭಾರತ ನಿರ್ಮಾಣ ಗುರಿ ಮುಟ್ಟುವ ವಿಶ್ವಾಸವಿದೆ ಎಂದು ರಾಷ್ಟ್ರಪತಿ ರಮನಾಥ್ ಕೋವಿಂದ್ ತಿಳಿಸಿದರು.
ಸಂಸತ್‌ನ ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡಿದರು. ಈ ವೇಳೆ ಮಾತನಾಡಿದ ಅವರು, ಚುನಾವಣೆ ಯಶಸ್ವಿಗೆ ಕಾರಣರಾದ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಭಾರಿ ಮಹಿಳೆಯರು ಹೆಚ್ಚಿನ ಮತದಾನ ಮಾಡಿದ್ದಾರೆ. ಪುರುಷರಿಗೆ ಸಮಾನವಾಗಿ ಮತದಾನ ಮಾಡಿದ್ದಾರೆ. ‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 61 ಕೋಟಿಗೂ ಹೆಚ್ಚು ಜನ ಮತ ಚಲಾಯಿಸಿದ್ದು ಜಗತ್ತಿನಲ್ಲಿ ದೇಶದ ಪ್ರಜಾಪ್ರಭುತ್ವವನ್ನ ಪ್ರಖ್ಯಾತಿಗೊಳಿಸಿದ್ದಾರೆ. ಭಾರತದ ಜನ ಸರ್ಕಾರಕ್ಕೆ ಪೂರ್ಣ ಬಹುಮತ ನೀಡಿದ್ದಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಹಾದಿಯಲ್ಲಿ ಈ ಸರ್ಕಾರ ಸಾಗುತ್ತಿದೆ’ ಎಂದು ನುಡಿದರು.
ಜಂಟಿ ಸದನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ ಹೇಳಿದ್ದಿಷ್ಟು….
30 ದಶಕದ ಬಳಿಕ ಬಹುಮತ ಪಡೆದ ಸರ್ಕಾರ ಅಧಿಕಾರಕ್ಕೆ ಬಂದಿದೆ. ದೇಶದ ಜನರನ್ನ ಸಶಕ್ತರನ್ನಾಗಿಸುವುದೇ ಸರ್ಕಾರದ ಗುರಿಯಾಗಿದೆ. 2022ರ ವೇಳೆಗೆ ನವಭಾರತ ನಿರ್ಮಾಣ ಗುರಿ ಮುಟ್ಟುವ ವಿಶ್ವಾಸವಿದೆ. ಗ್ರಾಮೀಣ ಭಾರತ, ನಗರ ಪ್ರದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಿದೆ.
ಯೋಧರು, ರೈತರ ರಕ್ಷಣೆ ನಮ್ಮ ಉದ್ದೇಶ. ಹುತಾತ್ಮ ಯೋಧರ ಮಕ್ಕಳ ಸ್ಕಾಲರ್ ಶಿಪ್ ಹೆಚ್ಚಳ ಮಾಡಿದ್ದೇವೆ. ಜಲ ಸಂರಕ್ಷಣೆಗೆ ಜಲಶಕ್ತಿ ಸಚಿವಾಲಯ ರಚಿಸಿದ್ದೇವೆ. ಕೃಷಿ ಉತ್ಪಾದನೆ ಹೆಚ್ಚಿಸಲು 25 ಲಕ್ಷ ಕೋಟಿ ಯೋಜನೆ ಹಾಕಿದ್ದೇವೆ.
‘ರಾಷ್ಟ್ರೀಯ ಜೀವನೋಪಾಯ ಮಿಷನ್’ ಅಡಿ ಗ್ರಾಮೀಣ ಪ್ರದೇಶದ 3 ಕೋಟಿ ಮಹಿಳೆಯರಿಗೆ 2 ಲಕ್ಷ ಕೋಟಿ ವಿತರಿಸಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಿಂದ 26 ಲಕ್ಷ ಬಡ ರೋಗಿಗಳಿಗೆ ಪ್ರಯೋಜನವಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸ್ವ-ಉದ್ಯೋಗಕ್ಕಾಗಿ 19 ಕೋಟಿ ಜನರಿಗೆ ಸಾಲ ನೀಡಲಾಗಿದೆ. ಈ ಯೋಜನೆಯ ವ್ಯಾಪ್ತಿಯನ್ನು 30 ಕೋಟಿ ಜನರಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಅತಿ ಹೆಚ್ಚು ಸ್ಟಾರ್ಟ್ ಅಪ್‌ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. 112 ಮಾದರಿ ಜಿಲ್ಲೆಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸುವ ಸಲುವಾಗಿ ತ್ರಿವಳಿ ತಲಾಖ್, ನಿಖಾ-ಹಲಾಲದಂತಹ ಆಚರಣೆಗಳಿಂದ ದೂರವಿರಬೇಕು. ಮಹಿಳೆಯರ ಸಬಲೀಕರಣ ನನ್ನ ಸರ್ಕಾರದ ಪ್ರಮುಖ ಆದ್ಯತೆ. ಮಹಿಳೆಯರು ಬೆಳವಣಿಗೆ ಹೊಂದುವುದಷ್ಟೇ ಅಲ್ಲ, ಅಭಿವೃದ್ಧಿಯ ನೇತೃತ್ವ ವಹಿಸಿಕೊಳ್ಳುವಂತಾಗಬೇಕು.
Key words: President -Ramanath Kovind –speech- joint session – Parliament.