ಕೊಡಗು,ಫೆಬ್ರವರಿ,6,2021(www.justkannada.in): ಕರ್ನಾಟಕ ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ರಮನಾಥ್ ಕೋವಿಂದ್ ಇಂದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ತಲಕಾವೇರಿಗೆ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ತಲಕಾವೇರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಆಗಮಿಸಲಿದ್ದಾರೆ. ಮಡಿಕೇರಿ ತಾಲೂಕಿನ ಭಾಗಮಂಡಲ ಕಾವೇರಿ ಕಾಲೇಜಿನ ಹೆಲಿಪ್ಯಾಡ್ ಗೆ ಆಗಮಿಸಲಿರುವ ರಾಷ್ಟ್ರಪತಿ ರಮನಾಥ್ ಕೋವಿಂದ್ ದಂಪತಿ, ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಬಳಿಕ ಹೆಲಿಕಾಪ್ಟರ್ ಮೂಲಕ 12 ಗಂಟೆಗೆ ಮಡಿಕೇರಿ ಎಫ್ ಎಂ ಸಿ ಕಾಲೇಜು ಮೈದಾನದ ಹೆಲಿಪ್ಯಾಡ್ ಗೆ ತೆರಳಿ ಬಳಿಕ ಖಾಸಗಿ ಹೋಟೆಲ್ ನಲ್ಲಿ ಊಟ ಮಾಡಲಿದ್ದಾರೆ. ನಂತರ ಮಧ್ಯಾಹ್ನ ಖಾಸಗಿ ಹೋಟೆಲ್ ನಿಂದ ರಸ್ತೆ ಮೂಲಕ 3 ಗಂಟೆಗೆ ಸನ್ನಿಸೈಡ್ ಯುದ್ಧ ಸ್ಮಾರಕಕ್ಕೆ ಆಗಮಿಸಲಿದ್ದಾರೆ.
ಜನರಲ್ ತಿಮ್ಮಯ್ಯ ನಿವಾಸ ಸನ್ನಿಸೈಡ್ ನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿರ್ಮಿಸಿರುವ ವಾರ್ ಮ್ಯೂಸಿಯಂ ಅನ್ನ ರಾಷ್ಟ್ರಪತಿ ರಮನಾಥ್ ಕೋವಿಂದ್ ಉದ್ಘಾಟನೆ ಮಾಡಲಿದ್ದಾರೆ. ಬಳಿಕ 35 ನಿಮಿಷಗಳ ಕಾಲ ಮ್ಯೂಸಿಯಂ ನಲ್ಲಿರುವ ಯುದ್ಧ ಟ್ಯಾಂಕರ್, ಯುದ್ಧ ವಿಮಾನ, ಮ್ಯೂಸಿಯಂ ವೀಕ್ಷಣೆ ಮಾಡಿ 3.45 ಕ್ಕೆ ಸನ್ನಿಸೈಡ್ ನಿಂದ ವಾಪಸ್ ಆಗಲಿದ್ದಾರೆ. ಎಫ್ ಎಂ ಸಿ ಕಾಲೇಜು ಬಳಿಯಿಂದ ಹೆಲಿಕಾಪ್ಟರ್ ಮೂಲಕ ವಾಪಸ್ ತೆರಳಲಿದ್ದಾರೆ.
Key words: President -Ramanath Kovind -visits –madikeri-today.