ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮತದೊಂದಿಗೆ ಗೆಲುವು ಸಾಧಿಸುವುದು ನಿಶ್ಚಿತ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು  ಜುಲೈ,18,2022(www.justkannada.in):  ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ 2/3  ಬಹುಮತದೊಂದಿಗೆ ಗೆಲ್ಲುವುದು ನಿಶ್ಚಿತ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ,  ರಾಷ್ಟ್ರಪತಿ ಚುನಾವಣೆಯಲ್ಲಿ ಇದ್ದ ಹಿಂದಿನ  ದಾಖಲೆಯನ್ನ  ಮುರಿಯುವ ಎಲ್ಲಾ ಸಾಧ್ಯತೆಗಳಿವೆ.  ದ್ರೌಪದಿ ಮುರ್ಮು ಅವರು ಮಾನವೀಯ ಗುಣಗಳನ್ನು ಹೊಂದಿದ್ದು, ಅತ್ಯುನ್ನತ ಸ್ಥಾನ ಕ್ಕೇರುವುದು ಭಾರತದ ಪ್ರಜಾಪ್ರಭುತ್ವ ಹಾಗೂ ಭವಿಷ್ಯಕ್ಕೆ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದರು.

ದೇಶಾದ್ಯಂತ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ದೆಹಲಿ, ಸಂಸತ್ತಿನಲ್ಲಿ, ರಾಜ್ಯಸಭಾ, ಲೋಕಸಭಾ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ನಡೆಯುತ್ತಿದೆ. ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬಹಳಷ್ಟು ಸಹಮತ ಮತ್ತು  ಸಂತೋಷ ದೇಶಾದ್ಯಂತ ಮೂಡಿಬಂದಿದೆ. ಎನ್.ಡಿ.ಎ ಮಿತ್ರ ಪಕ್ಷಗಳಷ್ಟೇ ಅಲ್ಲ ವಿರೋಧ ಪಕ್ಷದಲ್ಲಿಯೂ ಮುಕ್ತವಾಗಿ ಬೆಂಬಲ ಸೂಚಿಸಿದ್ದಾರೆ.  ದ್ರೌಪದಿ ಮುರ್ಮು ಅವರು ಒಬ್ಬ ದಕ್ಷ ಆಡಳಿತಗಾರರಾಗಿ ಮುನಿಸಿಪಾಲಿಟಿ ಉಪಾಧ್ಯಕ್ಷೆಯಾಗಿ,ಮಂತ್ರಿ,  ಶಾಸಕರು ಮತ್ತು ರಾಜ್ಯಪಾಲರಾಗಿ ಅವರ ಸೇವೆ ಅಮೋಘವಾಗಿದೆ. ಬುಡಕಟ್ಟು ಸಮುದಾಯದಿಂದ ಬಂದವರು, ಉತ್ತಮ ಕೆಲಸ ಮಾಡಿದವರಿಗೆ ಅತ್ಯುನ್ನತ ಸ್ಥಾನ ಲಭಿಸುತ್ತಿದೆ.  ಪ್ರಜಾಪ್ರಭುತ್ವದ ಹಿರಿಮೆ ಮತ್ತು ಗರಿಮೆ. ಇಂಥ ಕೆಲಸವನ್ನು ಎನ್.ಡಿ.ಎ.ಮುಖ್ಯಸ್ಥರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಯ್ಕೆ ಮಾಡಿ ಇಡೀ ದೇಶದಲ್ಲಿ ಒಂದು ಸಂಚಲನ ಹಾಗೂ ಸಂದೇಶವನ್ನು ನೀಡಿದ್ದಾರೆ. ವಿರೋಧ ಪಕ್ಷದಲ್ಲಿರುವವರು ನಮ್ಮ ಕರ್ನಾಟಕದ ಜೆ.ಡಿ.ಎಸ್. ಮುಖ್ಯಸ್ಥರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಜಾರ್ಖಂಡ್ ಮುಕ್ತಿ ಮೋರ್ಚಾ, ವೈ. ಎಸ್.ಆರ್ ಪಕ್ಷ ಸೇರಿದಂತೆ ಹಲವಾರು ಪಕ್ಷಗಳು ಬೆಂಬಲಿಸಿರುವುದರಿಂದ ಗೆಲ್ಲುವುದು ನಿಶ್ಚಿತ ಎಂದರು.

ಹಾಲು, ಮೊಸರು ದರ ಏರಿಕೆ: ಮರುಪಾವತಿ ಪಡೆದರೆ ದರ ಹೆಚ್ವಿಸುವ ಅಗತ್ಯವಿಲ್ಲ..

ಬ್ರಾಂಡೆಡ್ ಹಾಗೂ ಪ್ಯಾಕೇಜ್ಡ್ ಹಾಲು , ಮೊಸರು ಮಾರುವವವರಿಗೆ ಮಾತ್ರ 5%  ಜಿ.ಎಸ್.ಟಿ ಹಾಕಲಾಗಿದೆ. ಇದನ್ನು ಅವರು  ಕ್ಲೇಮು ಮಾಡಲು ಅವಕಾಶವಿದೆ. ಮರುಪಾವತಿ ಪಡೆದರೆ ಅವರು ಇದನ್ನು  ವಾಪಸ್ಸು ಪಡೆಯಬಹುದು. ಈಗಿನ ದರಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ. ಹೆಚ್ಚಳ ಮಾಡುವ ಅವಶ್ಯಕತೆ ಇಲ್ಲ. ಇದರ ಬಗ್ಗೆ ಬರುವ ದಿನಗಳಲ್ಲಿ ಗಮನಹರಿಸಲಾಗುವುದು. ಗ್ರಾಹಕರಿಗೆ ಅದನ್ನು ದಾಟಿಸಬಾರದು . ಇದನ್ನು ಜಿ.ಎಸ್.ಟಿ ಮಂಡಳಿಯಲ್ಲಿ ಚರ್ಚಿಸಿ, ಸೂಚನೆ ನೀಡಲಾಗುವುದು ಎಂದರು.

Key words: Presidential-candidate-Draupadi Murmu – win –majority-CM-Basavaraja Bommai.

ENGLISH SUMMARY…

“Victory of presidential candidate Droupadi Murmu with majority definite”: CM Bommai
Bengaluru, July 18, 2022 (www.justkannada.in): Chief Minister Basavaraj Bommai today asserted that the victory of NDA presidential candidate Droupadi Murmu is most certain. “She will win 2/3 majority votes as most of the parties have extended their support,” he observed.
Speaking to the press reporters at Vidhana Soudha today, the Chief Minister said, ” this time there are all possibilities where the presidential elections will break all the earlier records. Droupadi Murmu is a woman possessing human values. We believe that her victory would be good for the democracy of our country and the future.”
Replying to a question, the CM informed that 5% GST will be applicable for those who sell branded and packaged milk and curds. “They can also claim it and get it back. The prices will not shoot up further. There is no need to increase also as of now. We will focus on it in the coming days. It should not be passed on to the consumers. It will be discussed in the GST Board meeting and instructions will be given,” he added.
Keywords: Droupadi Murmu/ Chief Minister Basavaraj Bommai/victory/ certain