ಬೆಂಗಳೂರು,ಮೇ,19,2021(www.justkannada.in): ಕಳೆದ ಬಾರಿ ಕೊರೋನ ಆರಂಭವಾಗಿ ಲಾಕ್ ಡೌನ್ ಆದಾಗ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತನ್ನ ಸದಸ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಸಹಾಯ ಹಸ್ತ ಚಾಚಿತ್ತು. ಇದೀಗ ಮತ್ತೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪತ್ರಕರ್ತರ ನೆರವಿಗೆ ಬಂದಿದ್ದು, AA’ ಆಂಬ್ಯುಲೆನ್ಸ್ ಎಂಬ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡು ಆ್ಯಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾದ ಸದಾಶಿವ್ ಶೆಣೈ, ಕಳೆದ ಬಾರಿ ಕೊರೋನ ಆರಂಭವಾಗಿ ಲಾಕ್ ಡೌನ್ ಆದಾಗ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತನ್ನ ಸದಸ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಸಹಾಯ ಹಸ್ತ ಚಾಚಿತ್ತು. ಈ ಬಾರಿ ಕೊರೋನ ವಿಕೋಪಕ್ಕೆ ಹೋದಾಗ ಸರಕಾರದ ಸಹಾಯದಿಂದ ವಾಕ್ಸಿನೇಷನ್ ಕೂಡ ಮಾಡಿಸಿದ್ದೇವೆ. ಇದರ ಮಧ್ಯೆಯೂ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸದಸ್ಯರು ಕಡು ಕಷ್ಟದ ಈ ಕಾಲದಲ್ಲಿ ವೈದ್ಯಕೀಯ ಸವಲತ್ತು ಅದರಲ್ಲೂ ಆಂಬ್ಯುಲೆನ್ಸ್ ಸಿಗದೆ ಪರದಾಡುವುದನ್ನು ನೋಡಿ ನಮ್ಮ ಮನಸ್ಸೂ ಮರುಗಿದೆ. ಹೀಗಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹೊಸ ಯೋಜನೆಯ ಮುಖಾಂತರ ತನ್ನ ಸದಸ್ಯರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಪುಟ್ಟ ಹೆಜ್ಜೆ ಇಟ್ಟಿದೆ.
AA’ ಆಂಬ್ಯುಲೆನ್ಸ್ ಎಂಬ ಸಂಸ್ಥೆ ಜೊತೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಒಡಂಬಡಿಕೆ ಮಾಡಿ ಕೊಂಡಿದೆ. ನಮ್ಮ ಸದಸ್ಯರ ಅಥವಾ ಅವರ ಕುಟುಂಬದ ಮಂದಿಯ ಆರೋಗ್ಯದಲ್ಲಿ ಏರುಪೇರಾದರೆ ಕೆಳಗೆ ನೀಡಿದ ಈ ನಂಬರ್ ಗಳಿಗೆ ಕರೆ ಮಾಡಿದರೆ 15 ರಿಂದ 20 ನಿಮಿಷದೊಳಗೆ ಆಂಬುಲೆನ್ಸ್ ನಿಮ್ಮ ಸೇವೆಗೆ ಸದಾ ಸಿದ್ಧವಿರುತ್ತದೆ. ದುಬಾರಿ ದರದ ಬದಲು ಮಾಮೂಲಿ ದರದಲ್ಲೇ ಈ ಸೇವೆ ನಮ್ಮ ಸದಸ್ಯರಿಗೆ ಲಭ್ಯವಾಗಲಿದೆ. ಅಂದಹಾಗೆ ಸದಸ್ಯರ ರೆಫರೆನ್ಸ್ ಮೂಲಕ ಪ್ರೆಸ್ ಕ್ಲಬ್ ಸದಸ್ಯರಲ್ಲದ ಪತ್ರಕರ್ತರು ಕೂಡ ಕಷ್ಟದ ಈ ಸಮಯದಲ್ಲಿ ಇದನ್ನು ಬಳಸಬಹುದು. ಅಗತ್ಯವಿದ್ದವರು ನಮ್ಮ ಪ್ರೆಸ್ ಕ್ಲಬ್ ನ ಮ್ಯಾನೇಜರ್ ಲಕ್ಷ್ಮಣ್ 9449114752 ಅಥವಾ AA ಆ್ಯಂಬುಲೆನ್ಸ್ ಸರ್ಮಿಸ್ ನ ಮುಖ್ಯಸ್ಥರನ್ನು 7019119989, 9731110931 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಾಗೆಯೇ ನಮ್ಮ ಶ್ರಮ ವ್ಯರ್ಥ ಆದರೂ ಪರವಾಗಿಲ್ಲ, ಈ ಒಂದು ವ್ಯವಸ್ಥೆಯನ್ನು ಉಪಯೋಗಿಸುವ ಸನ್ನಿವೇಶ ನಿಮ್ಮ ಪಾಲಿಗೆ ಬಾರೆದೆ ಇರಲಿ ಎಂಬುದೇ ನಮ್ಮ ಆಶಯ ಮತ್ತು ಪ್ರಾರ್ಥನೆ. ಆದರೂ ಕೂಡ ಮುಂಜಾಗರೂಕತೆಗಾಗಿ ಈ ವಿಶೇಷ ವ್ಯವಸ್ಥೆಯನ್ನು ಮಾಡಿದ್ದೇವೆ. ಇದು ನಿಮಗೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇದರ ಕೊಡುಗೆ. ಜಾಗರೂಕತೆಯಿಂದ ಇರಿ… ಮಾಸ್ಕ್ ಧರಿಸಿ… ಸಾಮಾಜಿಕ ಅಂತರ ಪಾಲಿಸಿ ಎಂದು ಸದಾಶಿವ್ ಶೆಣೈ ಮಾಹಿತಿ ನೀಡಿದ್ದಾರೆ.
Key words: Press Club of Bangalore- journalists-number – ambulance service.