ಮೈಸೂರು,ಆಗಸ್ಟ್,26,2021(www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿಗಳ ಪ್ರದಾನ, ಅಭಿನಂದನೆ ಸಮಾರಂಭ ಆಯೋಜನೆ ಮಾಡಲಾಗಿತ್ತು.
ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಚಾಲನೆ ನೀಡಿದರು. ಮೈಸೂರು ವಿವಿ ಕುಲಪತಿ ಡಾ ಜಿ ಹೇಮಂತ್ ಕುಮಾರ್ ಅವರು ಪ್ರಧಾನ ಭಾಷಣ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್ ಟಿ ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ವಿ ರಾಜೀವ್ ಅವರು ಪ್ರಶಸ್ತಿಗೆ ಭಾಜನರಾದ ಪತ್ರಕರ್ತರಿಗೆ ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಎಲ್ ನಾಗೇಂದ್ರ ಆಗಮಿಸಿದ್ದರು.
ಈ ವೇಳೆ ದಿ ಹಿಂದು ಪತ್ರಿಕೆಯ ಡೆಪ್ಯೂಟಿ ಎಡಿಟರ್ ಆರ್ ಕೃಷ್ಣಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿಜಯಕರ್ನಾಟಕ ದಿನಪತ್ರಿಕೆಯ ಹಿರಿಯ ಉಪ ಸಂಪಾದಕ ಹೆಚ್ ಕೆ ನಾಗೇಶ್ ಅವರಿಗೆ ವರ್ಷದ ಹಿರಿಯ ಉಪ ಸಂಪಾದಕ, ಟೈಮ್ಸ್ ಆಫ್ ಇಂಡಿಯಾದ ಛಾಯಾಗ್ರಾಹಕ ಎಸ್ ಆರ್ ಮಧುಸೂದನ್ ಅವರಿಗೆ ವರ್ಷದ ಹಿರಿಯ ಛಾಯಾಗ್ರಾಹಕ ಪ್ರಶಸ್ತಿ, ಕೆ ಆರ್ ನಗರದ ಮೈಸೂರು ಮಿತ್ರ ವರದಿಗಾರ ಕೆ ಟಿ ರಮೇಶ್ ಅವರಿಗೆ ವರ್ಷದ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿ, ಪಬ್ಲಿಕ್ ಟಿವಿಯ ವರದಿಗಾರ ಕೆಪಿ ನಾಗರಾಜ್ ಗೆ ವರ್ಷದ ಹಿರಿಯ ದೃಶ್ಯ ಮಾಧ್ಯಮ ವರದಿಗಾರ ಪ್ರಶಸ್ತಿ ಮತ್ತು ಪಬ್ಲಿಕ್ ಟಿವಿಯ ಕ್ಯಾಮರಾಮನ್ ಇ ಕಾರ್ತಿಕ್ ಗೆ ವರ್ಷದ ಹಿರಿಯ ದೃಶ್ಯ ಮಾಧ್ಯಮ ಕ್ಯಾಮರಾ ಮನ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಇದೇ ವೇಳೆ ಉದಯವಾಣಿಯ ವರದಿಗಾರ ಸತೀಶ್ ದೇಪುರ ಅವರಿಗೆ ವರ್ಷದ ಕನ್ನಡ ವರದಿಗಾರಿಕೆ ಪ್ರಶಸ್ತಿ, ಹುಣಸೂರಿನ ಪ್ರಜಾವಾಣಿ ವರದಿಗಾರ ಹೆಚ್ ಎಸ್ ಸಚ್ಚಿತ್ ಅವರಿಗೆ ವರ್ಷದ ಕನ್ನಡ ಗ್ರಾಮಾಂತರ ವರದಿ ಪ್ರಶಸ್ತಿ, ಸ್ಟಾರ್ ಆಫ್ ಮೈಸೂರು ಪತ್ರಿಕೆಯ ವರದಿಗಾರ ರಾಜಕುಮಾರ್ ಭಾವಸಾರ್ ರಿಗೆ ವರ್ಷದ ಇಂಗ್ಲಿಷ್ ವರದಿ ಪ್ರಶಸ್ತಿ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಫೋಟೋಗ್ರಾಫರ್ ಎಸ್ ಉದಯಶಂಕರ್ ಅವರಿಗೆ ವರ್ಷದ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ, ದೂರದರ್ಶನದ ವರದಿಗಾರ ಜಿ ಜಯಂತ್ ಮತ್ತು ಕ್ಯಾಮರಾ ಮನ್ ರಾಮು ಅವರಿಗೆ ವರ್ಷದ ಅತ್ಯುತ್ತಮ ವಿದ್ಯುನ್ಮಾನ ವರದಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಕೂಡ್ಲಿ ಗುರುರಾಜ್ ಮತ್ತು ಸಿ ಕೆ ಮಹೇಂದ್ರರವರಿಗೆ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಧ್ವಿ ದಿನಪತ್ರಿಕೆಯ ಸಂಪಾದಕರಾದ ಸಿ ಮಹೇಶ್ವರನ್ ರವರಿಗೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್, ಕನ್ನಡಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಅಂಶಿ ಪ್ರಸನ್ನಕುಮಾರ್ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
Key words: Press Day -Annual Awards – Presentation – Mysore- District -Journalists –Association