ಬೆಲೆ ಏರಿಕೆ: ತಾಕತ್ತಿದ್ದರೆ ಬಿಜೆಪಿಯವರು ಮೋದಿ ಅವರನ್ನ ಪ್ರಶ್ನೆ ಮಾಡಲಿ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಏಪ್ರಿಲ್,8,2025 (www.justkannada.in): ಪ್ರಧಾನಿ ನರೇಂದ್ರ  ಮೋದಿ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿದೆ. ತಾಕತ್ತಿದ್ದರೇ ಬಿಜೆಪಿಯವರು ಇದನ್ನ ಪ್ರಶ್ನಿಸಲಿ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸವಾಲು ಹಾಕಿದರು.

ರಾಜ್ಯ ಸರ್ಕಾರದಿಂದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕುರಿತು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ,  ನಾವು ಗ್ಯಾರಂಟಿಗಳ ಜೊತೆ ಅಭಿವೃದ್ದಿ ಮಾಡುತ್ತಿದ್ದೇವೆ.  ಜಗತ್ತಿನಲ್ಲಿ ಬಿಜೆಪಿಯಷ್ಟು ಸುಳ್ಳುಗಾರರು ಯಾರಿಲ್ಲ. ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆ ಮಾಡಿದ್ದಾರೆ. ಮೋದಿ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ್ದಾರೆ. ಬಿಜೆಪಿಯವರು ತಾಕತ್ತಿದ್ದರೆ ಪ್ರಶ್ನೆ ಮಾಡಲಿ. ಬಿಜೆಪಿ  ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಸಾರಿಗೆ ಸಿಬ್ಬಂದಿಗೆ ಬಿಜೆಪಿ ಹಣ ಇಟ್ಟಿರಲಿಲ್ಲ. ಈಗ ಗ್ಯಾರಂಟಿ ಯೋಜನೆಗಳ ಜೊತೆಗೆ ಎಲ್ಲವನ್ನೂ ನಾವು ನಿರ್ವಹಣೆ ಮಾಡುತ್ತಿದ್ದೇವೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Price Rise, BJP, will, question, Modi