ಎಂಪಿ ಚುನಾವಣೆ ಸೋಲಿನ ಕೋಪಕ್ಕೆ ಬೆಲೆ ಏರಿಕೆ: ಗ್ಯಾರಂಟಿ ಹೆಸರಲ್ಲಿ ಲೂಟಿ- ಆರ್.ಅಶೋಕ್ ವಾಗ್ದಾಳಿ

ಬೆಳಗಾವಿ,ಜೂನ್,25,2024 (www.justkannada.in):  ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೆ ಇಂದು ಹಾಲಿನ ದರ ಏರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಆರ್.ಅಶೋಕ್,  ಎಂಪಿ ಚುನಾವಣೆ ಸೋಲಿನ ಕೋಪಕ್ಕೆ ಬೆಲೆ ಏರಿಕೆ ಬರೆ ಎಳೆದಿದ್ದಾರೆ. ಹಾಲಿನ  ದರ ಕಳೆದ ವರ್ಷ 3 ರೂ ಏರಿಕೆ ಮಾಡಿದ್ದರು. ಈ ವರ್ಷ 2 ರೂ ಏರಿಕೆ ಮಾಡಿದ್ದಾರೆ. ಬೆಳಿಗ್ಗೆ ಮಕ್ಕಳಿಗೆ ಹಾಲು ಕುಡಿಯಲು ಹೊರೆ ಆಗುತ್ತೆ.  ಸಂಜೆ ಕೆಲಸ ಮಾಡಿ ಬರುವರಿಗೆ ಆಲ್ಕೋಹಾಲ್ ಕುಡಿಯಲು ಹೊರೆ ಆಗುತ್ತೆ. ಸಿಎಂ,  ಡಿಸಿಎಂ ಬಡವರ ರಕ್ತವನ್ನ ತಿಗಣೆಯಂತೆ ಹೀರುತ್ತಿದ್ದಾರೆ ಎಂದು ಹರಿಹಾಯ್ದರು

ಚುನಾವಣೆಯಾದ ಮೇಲೆ ಬೆಲೆ ಕಡಿಮೆ ಮಾಡೋ ಭರವಸೆ ನೀಡಿದ್ರು.  ಸಿಎಂಗೆ ಎಷ್ಟು ನಾಲಿಗೆ ಇದೆ  ಎಂದು ಗುಡುಗಿದ ಆರ್.ಅಶೋಕ್, ಕಾಫಿ, ಟೀ ಕುಡಿಯಲು ಕಲ್ಲು ಹಾಕಿದ ಸಿದ್ದರಾಮಯ್ಯ ಸರ್ಕಾರ. ಈ ಸರ್ಕಾರ ಬಹಳ ದಿನ ಉಳಿಯಲ್ಲ  ಎಂದು ಕಿಡಿಕಾರಿದರು.

ರಾಹುಲ್ ಗಾಂಧಿಗೆ ಕಪ್ಪ ಕಾಣಿಕೆ ಕೊಡಲಿದ್ದಾರೆ. ಬಡವರನ್ನ ಸರ್ವನಾಶ ಮಾಡಲು ಬೆಲೆ ಏರಿಕೆ ಮಾಡುತ್ತಿದ್ದಾರೆ ಬಸ್ ಟಿಕೆಟ್ ದರ ಏರಿಕೆಗೆ ಸರ್ಕಾರ ತಯಾರಿ ನಡೆಸಿದೆ ಅಧಿಕಾರಿಗಳಿಂದ  ಈಗಾಗಲೇ ವರದಿ ಪಡೆದುಕೊಂಡ ಮಾಹಿತಿ ಇದೆ. ಗ್ಯಾರಂಟಿ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಜನರು ಜಿಪಂ ಮತ್ತು  ಬಿಬಿಎಂಪಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ  ಎಂದು ಆರ್ ಅಶೋಕ್ ಎಚ್ಚರಿಕೆ ನೀಡಿದರು.

Key words: Price, rise, MP, election, defeat, R Ashok