ಬೆಂಗಳೂರು,ಅಕ್ಟೋಬರ್,31,2020(www.justkannada.in): ಕೊರೋನಾ ಮಹಾಮಾರಿ ಸಂಕಷ್ಟದ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ತರಕಾರಿ ಕೊಳ್ಳಲು ಹೋಗುವ ಗ್ರಾಹಕರು ಹೈರಾಣಾಗಿದ್ದಾರೆ.
ಬೆಂಗಳೂರಿನಲ್ಲಿ ಈರುಳ್ಳಿ, ಎಲೆಕೋಸು, ಕ್ಯಾರೆಟ್ , ಟಮೋಟೊ ಬೆಲೆಗಳಲ್ಲಿ ಏರಿಕೆಯಾಗಿದ್ದು, ಗಗನಕ್ಕೇರಿದ ತರಕಾರಿ ಬೆಲೆ ನೋಡಿ ಗ್ರಾಹಕರು ದಂಗಾಗಿದ್ದಾರೆ. ಈರುಳ್ಳಿ ಕೆಜಿಗೆ 100ರಿಂದ 120 ರೂ ಇದ್ದರೇ ಎಲೆಕೋಸು 50 ರೂ.ನಿಂದ 80 ರೂಪಾಯಿಗೆ ಬೆಲೆ ಏರಿಕೆಯಾಗಿದೆ.
ಹಾಗೆಯೇ ಕ್ಯಾರೆಟ್ ಬೆಲೆ 130 ರಿಂದ 140 ರೂಪಾಯಿ ಆಗಿದ್ದು, ತರಕಾರಿಗಳ ಬೆಲೆ ಕಂಡು ಬೆಂಗಳೂರಿನ ಜನತೆ ಕಂಗಾಲಾಗಿದ್ದಾರೆ.
Key words: price – vegetables –rise- state capital- Bangalore