ಚಿಕ್ಕಮಗಳೂರು,ಫೆಬ್ರವರಿ,25,2023(www.justkannada.in): ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನ ಉದ್ಘಾಟಿಸಲಿದ್ದು ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಶೃಂಗೇರಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿಕೆ, ತಾವು ಅಭಿವೃದ್ಧಿ ಮಾಡಿದ್ದೇವೆ ಎಂದು ಬಿಂಬಿಸಲು ಮೋದಿ ಬರ್ತಿದ್ದಾರೆ. ಶಿವಮೊಗ್ಗ ಏರ್ ಪೋರ್ಟ್ ಗೆ ಮೋದಿ ಕೊಡುಗೆ ಏನು..? ರಾಜ್ಯದ ಜನರು ಭೂಮಿ ನೀಡಿದ್ದಾರೆ. ಕೆಲವರಿಗೆ ಇನ್ನೂ ಹಣ ಬಂದಿಲ್ಲ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೋದಿ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.
ಮೈಸೂರು-ಬೆಂಗಳೂರು ರಸ್ತೆ ಧರ್ಮಕ್ಕೆ ಕೊಟ್ಟಿಲ್ಲ. ನಾನು 14 ತಿಂಗಳಲ್ಲಿ 9 ಸಭೆಗಳನ್ನ ಮಾಡಿದ್ದೇನೆ. ನಾನೇನು ಮಾಡಿದೆ ಅಂತಾ ಜನರಿಗೆ ಗೊತ್ತು. ಕೇವಲ ಮೋದಿಯಿಂದ ಅಭಿವೃದ್ಧಿಯಾಗಿಲ್ಲ. ನಾನು ಹುಟ್ಟುವ ಮುಚೆಯೂ ಅಭಿವೃದ್ದಿಯಾಗಿತ್ತು. ನೆಹರೂ ಕಾಲದಲ್ಲೂ ಸವಾಲುಗಳಿದ್ದವು ಎಂದರು.
ಇದು ಚುನಾವಣಾ ಸಮಯದ ಬಜೆಟ್ ಅಷ್ಟೆ. 3 ವರ್ಷದಿಂದ ಅಭಿವೃದ್ಧಿ ಮಾಡಿದ್ದರೇ ಮೆಚ್ಚುಗೆ ಪಡೆಯಬಹುದಿತ್ತು. ರಾಜ್ಯ ಬಜೆಟ್ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ. ಕರ್ನಾಟಕ ಚುನಾವಣೆ ಸಿಸ್ಟಮ್ ಬೇರೆ, ರಾಜ್ಯಗಳ ಚುನಾವಣೆ ಸಿಸ್ಟಮ್ ಬೇರೆ ಬಿಜೆಪಿಯವರು ನೂರು ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
Key words: Prime Minister- Modi- contribution – Shimoga- Airport – zero-HD Kumaraswamy