ಬೆಂಗಳೂರು,ಜೂನ್,3,2022(www.justkannada.in): ಕಳೆದ 8 ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದೆ. ಸಂಕಷ್ಟದ ನಡುವೆಯೂ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನುಡಿದರು.
ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಕೇಂದ್ರ ಸರ್ಕಾರದ ಸಾಧನೆ ಗುಣಗಾನ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 8 ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟಿದೆ. ಮೋದಿ ಅವರ ಅಧಿಕಾರಾವಧಿ ಬಹಳ ಸಂಕಷ್ಟಮಯವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಬಹಳ ಸಮಸ್ಯೆ ಆಗಿತ್ತು. ಹೀಗಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದರು.
ದೇಶದಲ್ಲಿ ವಿದೇಶಾಂಗ ನೀತಿ ಉತ್ತಮವಾಗಿದೆ. ಬಡವರಿಗೆ ಉಜ್ವಲ ಯೋಜನೆಯಡಿ ಸಿಲಿಂಡರ್ ನೀಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಲಸಿಕೆ ನೀಡಲಾಗಿದೆ. ಇತರೇ ದೇಶಗಳಿಗೂ ಉಚಿತ ಲಸಿಕೆ ನೀಡಲಾಗಿದೆ. 4 ಕೋಟಿ ಜನರಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಪ್ರಧಾನಿ ಮೋದಿ ಸಾಧನೆ ಜನರಿಗೆ ತಿಳಿಸೋದು ಪಕ್ಷದ ಕರ್ತವ್ಯ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂಧ್ಲಾಜೆ, ಪಠ್ಯದಲ್ಲಿ ಬಸವಣ್ಣ ಕುವೆಂಪುಗೆ ಅಪಮಾನ ಮಾಡಿಲ್ಲ. ಸರ್ಕಾರ ಕುವೆಂಪು ಅವರಿಗೆ ಗೌರವ ಕೊಡುತ್ತಿದೆ. ಬಸವಣ್ಣ ಬಗ್ಗೆಯೂ ವಿಶೇಷ ಗೌರವವಿದೆ. ಪಠ್ಯದಲ್ಲಿ ವ್ಯತ್ಯಾಸವಾಗಿದ್ದರೇ ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಎಲ್ಲಿಯೂ ದಾಳಿ ಆಗಿಲ್ಲ.ಅಲ್ಪ ಸ್ವಲ್ಪ ಜಾತಿಯ ಸಂಘರ್ಷ ಅಷ್ಟೇ ನಡೆದಿದೆ ಅಷ್ಟೇ . ಇಂತಹ ಘಟನೆಗಳಿಗೆ ಕೇಂದ್ರ ಸರಕಾರ ಎಲ್ಲಿಯೂ ಕಿಮ್ಮಕ್ಕೂ ಕೊಟ್ಟಿಲ್ಲ. ಈ ದೇಶದಲ್ಲಿ ಶಾಂತಿ ಕಾಪಾಡೋದು ಅಷ್ಟೇ ಸರಕಾರದ ಕರ್ತವ್ಯ. ಹಿಜಾಬ್ ಕೋಮು ಗಲಭೆ ಅಲ್ಲ ಆದರೆ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಇದು. ಸಮವಸ್ತ್ರದ ಬಗ್ಗೆ ನ್ಯಾಯಾಲಯ ಆದೇಶ ಇದೆ. ಈ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು. ಆದೇಶ ಪಾಲನೆ ಮಾಡವದರ ವಿರುದ್ದ ಸೂಕ್ತ ಕ್ರಮ ಆಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
Key words: Prime Minister –Modi-corruption-free –administration-Union Minister -Shobha Karandlaje.