ಮೈಸೂರು, ಜೂನ್ 19, 2022 (www.justkannada.in): ಮೈಸೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾರ್ಗಸೂಚಿಯನ್ನು ಮೈಸೂರು ನಗರ ಪೊಲೀಸರು ಪ್ರಕಟಿಸಿದ್ದಾರೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಗಮನಿಸಬೇಕಾದ ಸೂಚನೆಗಳು.
- ಸಾರ್ವಜನಿಕರಿಗೆ ನಿಗಧಿಪಡಿಸಲಾಗಿರುವ ಆಸನದ ವ್ಯವಸ್ಥೆಯಲ್ಲಿ ಬಂದು ಆಸೀನರಾಗಬೇಕು.
- ಸಾರ್ವಜನಿಕರು ಆಗಮಿಸುವಾಗ ನಿಗಧಿಪಡಿಸಿದ ಪ್ರವೇಶ ದ್ವಾರಗಳಿಂದಲೇ ಆಗಮಿಸತಕ್ಕದ್ದು.
- ಸಾರ್ವಜನಿಕರು ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳ ತಪಾಸಣೆಗೆ ಸಹಕರಿಸುವುದು.
- ಲೋಹ ಶೋಧಕ ಯಂತ್ರದ ಮೂಲಕ ತಪಾಸಣಿಗೆ ಒಳಪಟ್ಟು, ನಂತರ ಕಾರ್ಯಕ್ರಮದ ಸ್ಥಳಕ್ಕೆ ನಿಗಧಿ ಪಡಿಸಿದ ಸ್ಥಳಕ್ಕೆ ತೆರಳುವುದು.
- ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ತಮ್ಮೊಂದಿಗೆ ನೀರಿನ ಬಾಟಲ್, ಗಾಜಿನ ಬಾಟಲ್ ಬ್ಯಾಗ್, ವ್ಯಾನಿಟಿಬ್ಯಾಗ್, ಹರಿತವಾದ ವಸ್ತುಗಳು, ಯಾವದೇ ರೀತಿಯ ಆಯುಧಗಳು, ಲೋಹದ ವಸ್ತುಗಳು ಹಾಗೂ ಇತರೆ ಯಾವುದೇ ರೀತಿಯ ವಸ್ತುಗಳನ್ನು ಹೊಂದಿರಬಾರದು.
- ಯಾವುದೇ ರೀತಿಯ ಕರಪತ್ರ, ಬ್ಯಾನರ್, ಕಪ್ಪು ಬಟ್ಟೆ/ಪ್ಲಾಗ್, ಪ್ಲಕಾರ್ಡ್ಗಳಿಗೆ ಅನುಮತಿ ಇರುವುದಿಲ್ಲ.
- ಸಾರ್ವಜನಿಕರು ಮೊಬೈಲ್ಗೆ ಮಾತ್ರ ಅವಕಾಶವಿದ್ದು ಉಳಿದ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊಂದಲು ಅವಕಾಶ ಇರುವುದಿಲ್ಲ. (ಕ್ಯಾಮರಾ, ವೀಡಿಯೋಕ್ಯಾಮರಾ, ಪವರ್ ಬ್ಯಾಂಕ್, ಇಯರ್ಫೋನ್, ಹ್ಯಾಂಡ್ಸ್ ಫ್ರೀ ಇತ್ಯಾದಿ) ಮೊಬೈಲ್ ಫೋನ್ಗಳನ್ನು Switch off ಮಾಡಿರತಕ್ಕದ್ದು.
- ಬೆಂಕಿ ಉತ್ಪತ್ತಿ ಮಾಡುವ ಬೆಂಕಿಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಬರಬಾರದು.
- ಬೀಡಿ, ಸಿಗರೇಟ್, ಗುಟ್ಕಾ ಇತ್ಯಾದಿ ತಂಬಾಕು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇದಿಸಿದೆ.
- ಕರ್ಕಶ ಶಬ್ಧವನ್ನು ಮಾಡುವ ಪೀಪಿ, ತಮಟೆ, ನಗಾರಿ ಇತ್ಯಾದಿ ವಸ್ತುಗಳನ್ನು ನಿಷೇಧಿಸಿದೆ. ಸಾರ್ವಜನಿಕರು ತಮಗೆ ಮೀಸಲಿರುವ ಆಸನಗಳಲ್ಲಿಯೇ ಕುಳಿತುಕೊಳ್ಳುವುದು.
- ಸಾರ್ವಜನಿಕರು ಆಸೀನರಾದ ನಂತರ ಕಾರ್ಯಕ್ರಮ ಮುಗಿಯುವ ವರೆಗೆ ಒಂದು ಸೆಕ್ಟರ್ ನಿಂದ ಇನ್ನೊಂದು ಸೆಕ್ಟರ್ಗೆ ಹೋಗಬಾರದು.
- ಸಾರ್ವಜನಿಕರು ಆಸೀನರಾದ ಸ್ಥಳದಲ್ಲಿ ನಿಂತುಕೊಳ್ಳುವುದು, ಅನಾವಶ್ಯಕವಾಗಿ ತಿರುಗಾಡುವುದು, ಕುಚುವುದು ಇತ್ಯಾದಿ ಮಾಡದೆ ತಮ್ಮ ಅಕ್ಕ ಪಕ್ಕ ಆಸೀನರಾದ ಇತರರಿಗೆ ತೊಂದರೆಯಾಗದಂತೆ ವರ್ತಿಸಬೇಕು. ಯಾವುದೇ ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟಿಕೆ ಸಾಮಾನುಗಳು ಹಾಗೂ ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವುದು.
- ಕಾರ್ಯಕ್ರಮ ವೀಕ್ಷಣೆಗೆ ಬರುವವರು ತಮ್ಮ ವಾಹನಗಳನ್ನು ಸಂಚಾರಿ ಪೊಲೀಸರು ನಿಗdiಪಡಿಸಿರುವ ಸ್ಥಳದಲ್ಲೇ ನಿಲ್ಲಿಸುವುದು. ಸಾರ್ವಜನಿಕರು ಗಣ್ಯವ್ಯಕ್ತಿಗಳು ಸಾಗುವ ಮಾರ್ಗದಲ್ಲಿ ಗುಂಪು ಸೇರದೆ ಹಾಗು ಮಾರ್ಗಕ್ಕೆ ಬಂದು ಅಡ್ಡಿಯುಂಟು ಮಾಡದಂತೆ ಸಾಕಷ್ಟು ಅಂತರವನ್ನು ಕಾಯ್ದುಕೊಂಡು ದೂರದಿಂದಲೇ ವೀಕ್ಷಿಸತಕ್ಕದ್ದು.