ಮೈಸೂರು, ಮೇ 22, 2022 (www.justkannada.in): ಪ್ರಧಾನಿ ಮೋದಿ ಅವರು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ 80ನೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ವರ್ಚುವಲ್ ಲೈವ್ ಮೂಲಕ ಪ್ರಧಾನಿ ಮೋದಿ ಅವರು ಸಚ್ಚಿದಾನಂದ ಸ್ವಾಮೀಜಿಗೆ ಶುಭಕಾಮನೆಗಳನ್ನು ತಿಳಿಸಿದ್ದಾರೆ.
ಎಲ್ಲರಿಗೂ ಜಯ ಗುರುದತ್ತ. ಅಪ್ಪಾಜಿ ಅವರಿಗೆ 80 ನೇ ವರ್ಧಂತಿಯ ಶುಭಾಶಯಗಳು ಎಂದು ಕನ್ನಡದಲ್ಲಿ ಶುಭಾಶಯಗಳನ್ನು ಮೋದಿ ಕೋರಿದ್ದಾರೆ.
ಜಪಾನಿಗೆ ಹೋಗಬೇಕಾದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಸಾಮಾಜಿಕ ನ್ಯಾಯದ ಪ್ರೇರಣೆಯಾಗಿ ಗಣಪತಿ ಶ್ರೀಗಳು ಕೆಲಸ ಮಾಡುತ್ತಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಆಶ್ರಮ ಮಾಡಿ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಜನರ ಕಲ್ಯಾಣ ಮಠದ ಆಶಯ. ಅಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶ್ರೀ ಮಠದ ಕೊಡುಗೆ ಅಪಾರ ಎಂದು ಶ್ಲಾಘಿಸಿದ್ದಾರೆ.
ನಮ್ಮ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಸಾರುವ ಕೆಲಸವನ್ನು ಇಂತಹ ಮಠಗಳು ಮಾಡುತ್ತಿವೆ. ಸಬ್ ಕ್ ಸಾಥ್, ಸಬ್ ಕಾ ವಿಕಾಸ್ ಮಂತ್ರದಂತೆ ದೇಶ ಸಾಗುತ್ತಿದೆ. ನಮ್ಮ ಮುಂದೆ ಮುಂದಿನ 25 ವರ್ಷದ ರೂಪುರೇಷೆಯಿದೆ. ಈ ರೂಪು ರೇಷೆಯ ಕಾರ್ಯ ರೂಪಕ್ಕೆ ತರಲು ಇಂತಹ ಮಠಗಳ ಸಹಕಾರ ಮುಖ್ಯ ಎಂದು ಹೇಳಿದ್ದಾರೆ.
ರಾಷ್ಟ್ರ ನಿರ್ಮಾಣದಲ್ಲಿ ಮಠಗಳ ಪಾತ್ರ ಬಹಳ ಮುಖ್ಯವಾಗಿರುತ್ತ. ಗಣಪತಿ ಸಚ್ಚದಾನಂದ ಸ್ವಾಮೀಜಿಗೆ ಒಳ್ಳೆಯದಾಗಲಿ. ನಾನು ಅವರ ಅನುಯಾಯಿಯಾಗಿದ್ದೇನೆ. ಹನುಮ ದ್ವಾರ ಉದ್ಘಾಟನೆಯಾಗಿದೆ. ಎಲ್ಲರಿಗೂ ಸ್ವಾಮೀಜಿಗಳು ಒಳ್ಳೆಯದನ್ನ ಮಾಡುತ್ತಿದ್ದಾರೆ ಎಂದು ವರ್ಚುವಲ್ ಲೈವ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.