ಬೆಂಗಳೂರು, ಫೆಬ್ರವರಿ 26, 2023 (www.justkannada.in): ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿರುವ ನೆರೆಯ ಪಾಕ್‌ಗೆ ಪ್ರಧಾನಿ ಮೋದಿ ಸಹಾಯ ಮಾಡಲಿದ್ದಾರೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮಾಜಿ ಮುಖ್ಯಸ್ಥ ಅಮರ್‌ಜೀತ್ ಸಿಂಗ್ ದುಲಾತ್ ಹೇಳಿದ್ದಾರೆ.
ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿರುವ ನೆರೆಯ ಪಾಕ್‌ಗೆ ಪ್ರಧಾನಿ ಮೋದಿ ಸಹಾಯ ಮಾಡ್ತಾರೆ. ಅಷ್ಟೇ ಅಲ್ಲದೇ, ಈ ವರ್ಷದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಶಾಂತಿಯ ಹಸ್ತವನ್ನು ಚಾಚುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅಮರ್‌ಜೀತ್ ಸಿಂಗ್ ದುಲಾತ್ ತಿಳಿಸಿದ್ದಾರೆ.
ಭಾರತದ ಹೊಸ ಮಿತ್ರರಾಷ್ಟ್ರ ಅಮೆರಿಕ ದೂರದಲ್ಲಿದೆ. ನಮ್ಮ ನೆರೆಯ ರಾಷ್ಟ್ರ ತುಂಬಾ ಹತ್ತಿರದಲ್ಲಿದೆ. ನಾವು ನಮ್ಮ ಹತ್ತಿರದ ದೇಶಗಳ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ‘ಮೋದಿ ಜಿ ಈ ವರ್ಷ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ನೆರವು ನೀಡುವ ಬಗ್ಗೆ ಯಾವುದೇ ಆಂತರಿಕ ಮಾಹಿತಿಯಿಲ್ಲ ಇಲ್ಲʼ ಎಂದಿದ್ದಾರೆ ಅಮರ್‌ಜೀತ್ ಸಿಂಗ್ ದುಲಾತ್. ಅಂದಹಾಗೆ ದುಲಾತ್ ಅವರು RAW ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ನೆರೆಯ ದೇಶದಲ್ಲಿ ಹಲವಾರು ಗುಪ್ತಚರ ಕಾರ್ಯಾಚರಣೆಗಳನ್ನು ನಡೆಸಿದ್ದರು.