ಗಾಂಧಿನಗರ,ಅಕ್ಟೋಬರ್,31,2020(www.justkannada.in): ಇಂದು ಭಾರತದ ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಾಯ್ ಪಟೇಲರ 145ಬೇ ಜಯಂತಿಯಾಗಿದ್ದು ಈ ಅಂಗವಾಗಿ ದೇಶಾದ್ಯಂತ ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಮಾಡಲಾಗುತ್ತಿದೆ.
ರಾಷ್ಟ್ರೀಯ ಏಕತಾ ದಿನಾಚರಣೆ, ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಹಿನ್ನೆಲೆಯಲ್ಲಿ ಕೆವಾಡಿಯಾದಲ್ಲಿರುವ ಸರ್ದಾರ್ ಪಟೇಲರ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಕೇಂದ್ರ ಸಶಸ್ತ್ರ ಪಡೆ ಹಾಗೂ ಗುಜರಾತ್ ಪೊಲೀಸ್ ಪರೇಡ್ ವೀಕ್ಷಣೆ ಮಾಡಿ ಏಕತಾ ದಿವಸ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ಧಾರ್ ವಲ್ಲಭಾಯ್ ಪಟೇಲರು ದೇಶಕ್ಕೆ ವರ್ತಮಾನ ಸ್ವರೂಪವನ್ನ ನೀಡಿದರು. ಈಗ ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಸಾಗಿದೆ. ಗಡಿಗಳಲ್ಲಿ ದೇಶವನ್ನು ನೋಡುವ ದೃಷ್ಠಿ ಬದಲಾಗಿದೆ. ಗಡಿಗಳಲ್ಲಿ ರಸ್ತೆ ನಿರ್ಮಾಣ, ಸುರಂಗ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ದೇಶದಲ್ಲಿ ಅಭಿವೃದ್ಧಿಗಾಗಿ ಪಣ ತೊಟ್ಟಿದ್ದೇವೆ. ಇಂದಿನ ಭಾರತ ಸಾರ್ವಭೌಮತ್ವ ರಕ್ಷಿಸಲು ನಾವು ಸಿದ್ಧ. ಕೇವಾಡಿಯಾದಲ್ಲಿ ಸರ್ದಾರ್ ವಲ್ಲಬಾಯ್ ಪಟೇಲರ ಪ್ರತಿಮೆ ನಿರ್ಮಾಣವಾಗಿದೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದು ನಮ್ಮ ಸಂಸ್ಕೃತಿಯನ್ನು ಪುನರ್ ವೈಭವೀಕರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಯೋತ್ಪಾದನೆ ಅತಿದೊಡ್ಡ ಪಿಡುಗಾಗಿದ್ದು ಇಂದು ವಿಶ್ವದ ಎಲ್ಲಾ ದೇಶಗಳು ಅದರ ವಿರುದ್ಧ ಒಂದಾಗಿ ಹೋರಾಡಬೇಕು. ಭಯೋತ್ಪಾದನೆ, ಹಿಂಸಾಚಾರದಿಂದ ಯಾರಿಗೂ ಲಾಭವಿಲ್ಲ. ಭಾರತ ಯಾವತ್ತಿಗೂ ಅದಕ್ಕೆ ವಿರುದ್ಧವಾಗಿದೆ ಎಂದರು.
Key words: Prime Minister-Narendra Modi -addresses – National Ekata Diwas –Sardhar vallabai patel-jayanthi