ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಭಾನುವಾರ (ಡಿ. 12) ನಸುಕಿನ ಜಾವ ಕೆಲವೊತ್ತು ಹ್ಯಾಕ್ ಮಾಡಲಾಗಿದೆ.
ಪ್ರಧಾನಿ ಖಾತೆಯನ್ನು ಹ್ಯಾಕ್ ಮಾಡಿ ಬಿಟ್ಕಾಯಿನ್ ಬಗ್ಗೆ ಪ್ರಚಾರ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ.
ಪ್ರಧಾನಿ ಅವರ ಟ್ವಿಟರ್ ಖಾತೆ ಅಲ್ಪಾವಧಿವರೆಗೆ ಹ್ಯಾಕ್ ಆಗಿತ್ತು. ತಕ್ಷಣ ಟ್ವಿಟರ್ ಖಾತೆಯನ್ನು ಭದ್ರಪಡಿಸಲಾಗಿದೆ. ಹ್ಯಾಕ್ ಮಾಡಿದ ಕ್ಷಣದಲ್ಲಿ ಮಾಡಲಾದ ಯಾವುದೇ ಟ್ವೀಟ್ಗಳನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಟ್ವಿಟರ್ ಸಂಸ್ಥೆಯೊಂದಿಗೆ ಮಾತನಾಡಿ ಪ್ರಧಾನಿ ಕಾರ್ಯಾಲಯ ಸಮಸ್ಯೆ ಬಗೆಹರಿಸಿದೆ.
ಭಾರತವು ಲೀಗಲ್ ಟೆಂಡರ್ ಆಗಿ ಬಿಟ್ಕಾಯಿನ್ ಅನ್ನು ಸ್ವೀಕರಿಸಲಾಗಿದೆ. ಸರ್ಕಾರವು ಅಧಿಕೃತವಾಗಿ 500 ಬಿಟ್ಕಾಯಿನ್ ತೆಗೆದುಕೊಂಡಿದ್ದು, ದೇಶದ ಎಲ್ಲ ನಿವಾಸಿಗಳಿಗೆ ಅವುಗಳನ್ನು ವಿತರಿಸುತ್ತದೆ ಎಂದು ಹ್ಯಾಕ್ ಆಗಿದ್ದ ವೇಳೆ ಬರೆಯಲಾಗಿದೆ.