ಬೆಂಗಳೂರು,ಆಗಸ್ಟ್,26,2023(www.justkannada.in): ಚಂದ್ರಯಾನ-3 ಯಶಸ್ಸಿ ಆಗುತ್ತಿದ್ದಂತೆ ಐತಿಹಾಸಿಕ ಸಾಧನೆಗೆ ಕಾರಣರಾದ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಸ್ರೋ ವಿಜ್ಞಾನಿಗಳನ್ನ ಅಭಿನಂದಿಸಲು ಇಸ್ರೋ ಕಚೇರಿಗೆ ಭೇಟಿ ನೀಡಿದರು. HAL ಏರ್ಪೋರ್ಟ್ನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್, ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ರಿಂದ ಸ್ವಾಗತಿಸಿದರು.
ನಂತರ ಪೀಣ್ಯದ ಬಳಿಯ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿಕೊಟ್ಟು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಪ್ರಧಾನಿ ಮೋದಿ ಅವರಿಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಯು.ಆರ್.ರಾವ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಂ.ಶಂಕರನ್, ಇಸ್ಟ್ರಾಕ್ ನಿರ್ದೇಶಕ ಬಿ.ಎನ್.ರಾಮಕೃಷ್ಣ ಸ್ವಾಗತಿಸಿದರು.
ಚಂದ್ರಯಾನ-3 ಯೋಜನೆ, ಪ್ರಜ್ಞಾನ್ ರೋವರ್ ಕಾರ್ಯನಿರ್ವಹಣೆ, ಅನ್ವೇಷಣೆ ಬಗ್ಗೆ ಇಸ್ರೋ ವಿಜ್ಞಾನಿಗಳು ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದರು.
Key words: Prime Minister -Narendra Modi -visited – ISRO office -Bangalore