ಯುಪಿಎಸ್​ಸಿ ಪೂರಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಕ್ಕೂ ಆದ್ಯತೆ ನೀಡಿ : ಶಾಸಕ ಎನ್.ಮಹೇಶ್ ಒತ್ತಾಯ

ಚಾಮರಾಜನಗರ,ನವೆಂಬರ್,01,2020 :  ಕ್ರೇಂದ್ರದ ಯುಪಿಎಸ್​ಸಿ ಪೂರಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ಕನ್ನಡ‌ ಮಾಧ್ಯಮದಲ್ಲಿ ಓದುವ, ಬರೆಯುವವರಿಗೆ ತೊಂದರೆಯಾಗಿದೆ. ಮುಂದಿನ ವರ್ಷದಿಂದ ಕನ್ನಡದಲ್ಲೇ ಪ್ರಶ್ನೆ ‌ಪತ್ರಿಕೆ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಾಸಕ‌ ಎನ್ ಮಹೇಶ್ ಒತ್ತಾಯಿಸಿದ್ದಾರೆ.jk-logo-justkannada-logo

ಕೊಳ್ಳೇಗಾಲ ಪಟ್ಟಣದ ಪ್ರೌಢ ಶಾಲೆ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಯುಪಿಎಸ್​ಸಿ, ರೈಲ್ವೆ, ಬ್ಯಾಂಕಿಂಗ್‌ ಇನ್ನಿತರ ಪರೀಕ್ಷೆಗಳ ಪ್ರಶ್ನೆ ‌ಪ್ರತಿಕೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾತ್ರ ಇರುತ್ತವೆ. ಇದರಿಂದ ಕನ್ನಡ ಭಾಷೆಯ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂದರು.

ಪ್ರಾದೇಶಿಕ ಭಾಷೆಗೆ ಅನುಗುಣವಾಗಿ ಪ್ರಶ್ನೆ ಪ್ರತಿಕೆಗಳನ್ನು ಮುದ್ರಿಸಬೇಕು

ಆಯಾ ಪ್ರಾದೇಶಿಕ ಭಾಷೆಗೆ ಅನುಗುಣವಾಗಿ ಪ್ರಶ್ನೆ ಪ್ರತಿಕೆಗಳನ್ನು ಮುದ್ರಿಸಬೇಕು. 2500 ಸಾವಿರ ಇತಿಹಾಸವಿರುವ ಕನ್ನಡಕ್ಕೆ ಕೇಂದ್ರದ ಪರೀಕ್ಷೆಗಳಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

Prioritize-Kannada-UPSC-Supplementary-Examination-Question-Paper-Legislator-N.Mahesh-insists

ಅನ್ನ ನೀಡುವ ಭಾಷೆ ಕನ್ನಡ ಮಾತ್ರ

ಶಾಸಕ ನರೇಂದ್ರ ಮಾತನಾಡಿ, ಕನ್ನಡ ನಾಡು, ಜಲ, ನೆಲ‌, ಭಾಷೆಗಳಿಗೆ ಹೋರಾಡಿದವರ ಸ್ಮರಣೆಯನ್ನು ನಾವು ಸದಾ ಮಾಡಬೇಕು. ನಮಗೆ ಅನ್ನ ನೀಡುವ ಭಾಷೆ ಕನ್ನಡ ಮಾತ್ರ, ಆದ್ದರಿಂದ ನಮ್ಮ ಮಾತೃ ಭಾಷೆಯ ಮೇಲೆ ಹೆಚ್ಚಿನ ಅಭಿಮಾನ ಇಡಬೇಕು ಎಂದರು.
ಇದಕ್ಕೂ ಮುನ್ನ ಉಪವಿಭಾಗಧಿಕಾರಿ ಗಿರೀಶ್ ದಿಲೀಪ್ ಬದೋಲೆ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

ದಂಡಾಧಿಕಾರಿ ಕುನಾಲ್ ನಾಡ ಧ್ವಜಾರೋಹಣ ಮಾಡಿದ್ದು, ನಂತರ ಕನ್ನಡ ಭಾಷೆಯ ಇತಿಹಾಸದ ಸಂದೇಶವನ್ನು ತಿಳಿಸಲಾಯಿತು.

key words : Prioritize-Kannada-UPSC-Supplementary-Examination-Question-Paper-Legislator-N.Mahesh-insists