ಮೈಸೂರು,ಡಿಸೆಂಬರ್,20,2020(www.justkannada.in) : ರಂಗೇರಿದ ಗ್ರಾಮಪಂಚಾಯತಿ ಚುನಾವಣೆ. ಖಾಸಗೀ ಕಾಲೇಜಿನ ಪ್ರಾಂಶುಪಾಲನೀಗ ಗ್ರಾಮಪಂಚಾಯತಿ ಅಭ್ಯರ್ಥಿಯಾಗಿದ್ದಾರೆ.ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾ.ಪಂ.ವ್ಯಾಪ್ತಿಯ ಕೆಬ್ಬೇಪುರ ಕ್ಷೇತ್ರದಲ್ಲಿ ಮೈಸೂರಿನ ಭೋದಿಸತ್ವ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ನಂಜುಂಡಸ್ವಾಮಿ ಸ್ಪರ್ಧಿಸಿದ್ದಾರೆ.
ಕೆಬ್ಬೆಪುರ ಗ್ರಾಮದಲ್ಲಿ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಹಾಲಿ ಗ್ರಾಮ ಪಂಚಾಯತಿ ಸದಸ್ಯೆ ಸುಧಾ ಎರಡನೇ ಬಾರಿಗೂ ಸ್ಪರ್ಧೆಗಿಳಿದಿದ್ದು, ಮೂವರು ಪುರುಷರು ಸೇರಿದಂತೆ ಪದವೀಧರ ಮಹೇಶ್, ರೈತ ಸಂಪತ್ತು ಅವರು ಚುನಾವಣೆ ಮೂಲಕ ರಾಜಕೀಯ ರಂಗಪ್ರವೇಶ ಮಾಡಲಿದ್ದಾರೆ.

ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಕೆಬ್ಬೇಪುರ ಗ್ರಾಮದಲ್ಲಿ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದು, ಡಿಸೆಂಬರ್ 22ಕ್ಕೆ ಅಭ್ಯರ್ಥಿಗಳ ಹಣೆಬರಹ ಬರೆಯಲಿರುವ ಕ್ಷೇತ್ರದ ಮತದಾರರು. ಡಿಸೆಂಬರ್ 30ಕ್ಕೆ ಫಲಿತಾಂಶ ಹೊರಬೀಳಲಿದೆ.
key words : private-college-principal-now-Grappam-candidate