ಬೆಂಗಳೂರು,ಸೆಪ್ಟಂಬರ್,25,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಸಲ್ಲಿಸಲಾಗಿರುವ ಖಾಸಗಿ ದೂರಿನ ಕುರಿತು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ದೂರು ಸಂಬಂಧ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಬರೆಸುತ್ತಿದ್ದಾರೆ. ಮುಡಾ ಹಗರನದ ತನಿಖೆ ಅಗತ್ಯ ಕಣುತ್ತಿದೆ. ಪಿಸಿ ಕಾಯ್ದೆ 7ಸಿ ಅಡಿ ತನಿಖೆಗೆ ಅಗತ್ಯತೆ ಕಾಣುತ್ತಿದೆ. ದೇವರಾಜು ಜಮೀನು ಮಾಲಿಕ ಅಲ್ಲ. ಆದರೂ ದೇವರಾಜುನಿಂದ ಜಮೀನು ಖರೀದಿಸಲಾಗಿದೆ ದೇವರಾಜು ಹೆಸರಿಗೆ ಜಮೀನಿನ ನಕಲಿ ಡಿನೋಟಿಫುಕೇಷನ್ ಆಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಮುಡ ಹಗರಣಧ ನಿನ್ನೆಯ ಹೈಕೋರ್ಟ್ ಆದೇಶ ಉಲ್ಲೇಖಿಸಿ ನ್ಯಾಯಾಧೀಶರು ಆದೇಶ ಬರೆಸುತ್ತಿದ್ದು, ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೈಕೋರ್ಟ್ ಆದೇಶ ಪ್ರತಿಯನ್ನ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರು ಸಲ್ಲಿಸಿದ್ದಾರೆ.
Key words: private complaint, against, CM Siddaramaiah, Court