2020-21 ಸಾಲಿನ ಖಾಸಗಿ ಶಾಲೆ ಶುಲ್ಕ ವಿಚಾರ: ಹೆಚ್ಚುವರಿ ಫೀಸ್ ವಾಪಸ್ ನೀಡಲು ಸರ್ಕಾರ ಆದೇಶ.

ಬೆಂಗಳೂರು,ನವೆಂಬರ್,13,2021(www.justkannada.in):  ಖಾಸಗಿ ಶಾಲಾ ಶುಲ್ಕ ಪಾವತಿಸಿರುವ ಪೋಷಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು, 2020-21 ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಪಡೆದಿದ್ದರೆ, ಹೆಚ್ಚುವರಿ ಶುಲ್ಕವನ್ನು ವಾಪಸ್  ನೀಡುವಂತೆ ಸರ್ಕಾರ ಖಾಸಗಿ ಶಾಲೆಗಳಿಗೆ ಆದೇಶ ನೀಡಿದೆ.

ಖಾಸಗಿ ಶಾಲೆಗಳಲ್ಲಿ 2020-21 ನೇ ಸಾಲಿನ ಶೇಕಡಾ 30 ರಷ್ಟು ಶುಲ್ಕ ಕಡಿತ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಈ ಆದೇಶ ಪ್ರಶ್ನಿಸಿ  ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಶುಲ್ಕ ಪರಿಷ್ಕರಿಸಿ ಬೋಧನಾ ಶುಲ್ಕದಲ್ಲಿ ಶೇಕಡಾ 15 ರಷ್ಟು ಪಡೆದುಕೊಳ್ಳುವಂತೆ ಆದೇಶಿಸಿತ್ತು.

ಶುಲ್ಕ ಕಡಿಮೆ ಮಾಡುವಂತೆ ಪೋಷಕ ಸಂಘಟನೆಗಳು ಈ ಹಿಂದೆ ಪ್ರತಿಭಟನೆ ಕೂಡ ನಡೆಸಿದ್ದರು. ಸದ್ಯ ಹೈಕೋರ್ಟ್ ಆದೇಶದಂತೆ ಸರ್ಕಾರ ಅಧಿಕೃತವಾಗಿ 2020-21ನೇ ಸಾಲಿನ ಶುಲ್ಕ ಆದೇಶ ಪ್ರಕಟ ಮಾಡಿದೆ. ಆ ಮೂಲಕ ಬೋಧನಾ ಶುಲ್ಕದಲ್ಲಿ ಶೇಕಡಾ 15 ರಷ್ಟು ಪಡೆಯಲು ಆದೇಶಿಸಿದೆ.

Key words: Private school- fees- issue -2020-21-Government – issue -additional fee

ENGLISH SUMMARY…

Issue over fixing of private school fee for 2020-21: Government orders to return additional fee amount
Bengaluru, November 13, 2021 (www.justkannada.in): The State Government has given good news to the parents who have paid the fees of their children who are studying in private schools. Accordingly, all the private schools which have collected full fees for the year 2020-21 should return the additional fee amount to the respective parents.
The State Government had earlier issued orders to private schools to reduce 30% fee for the year 2020-21. But the Private Schools Federation had appealed in the court questioning the Government’s orders. The Hon’ble High Court after conducting the hearing had issued orders to the private schools to reduce the fee by 15%.
It can be recalled here that the parents of students who are studying in private schools had also protested demanding a reduction in the fee. Accordingly, the government has issued orders to the private schools to reduce the fee for the year 2020-21 by 15%.
Keywords: State Government/ High Court / orders / private schools