ಸಚಿನ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ; ಬಿಜೆಪಿ ಮುಖಂಡನ ಕುರಿತ ಆಡಿಯೋ ರಿಲೀಸ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರ್ಗಿ,ಜನವರಿ,2,2025 (www.justkannada.in):  ಗುತ್ತಿಗೆದಾರ ಸಚಿನ್ ಪಾಂಚಾಳ್ ಅತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಲ್ಬುರ್ಗಿ ರಿಪಬ್ಲಿಕ್ ಮಾಡಲು ಹೊರಟಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಟಾಂಗ್ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ,  ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಥೋಡ್ ಕುರಿತ ಆಡಿಯೋವೊಂದನ್ನ ಬಿಡುಗಡೆ ಮಾಡಿದರು.

ಮಣಿಕಂಠ ರಾಥೋಡ್  ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ.  ಬೆದರಿಕೆ ಹಾಕಿದವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ರಿ.  ಖರ್ಗೆ ಕುಟುಂಬ ನಾಶ ಮಾಡ್ತೀನಿ ಎಂದಿದ್ದಾನೆ.  ಆಡಿಯೋ ಬಗ್ಗೆ ದೂರು ಕೊಟ್ಟರೂ ಕ್ರಮ ಆಗಲಿಲ್ಲ. ಆತನ ವಿರುದ್ದ 30 ಕೇಸ್ ಇದ್ದರೂ ಕ್ರಮ ಆಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸಚಿನ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ.  ಬಿಜೆಪಿ ನಾಯಕರು ಸುಳ್ಳಿನ ಶೂರರಾಗಿದ್ದಾರೆ. ಸುಳ್ಳೇ ಬಿಜೆಪಿ ಬಂಡವಾಳ ಎಂದು ಪ್ರಿಯಾಂಕ್ ಖರ್ಗೆ ಗುಡುಗಿದರು.

Key words: Minister, Priyank Kharge, releases, audio,  BJP leader