ಮಂಡ್ಯ,ಆಗಸ್ಟ್,13,2022(www.justkannada.in): ಯುವತಿಯರು ನೌಕರಿ ಪಡೆಯಬೇಕಾದರೇ ಮಂಚ ಹತ್ತಬೇಕು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಬಿಎಸ್ ಯಡಿಯೂರಪ್ಪ, ಪ್ರಿಯಾಂಕ್ ಖರ್ಗೆ ಹೇಳಿಕೆ ಶೋಭೆ, ಗೌರವ ತರುತ್ತಾ..? ಕಾಂಗ್ರೆಸ್ ಮುಖಂಡರಾದವರು ಹೀಗೆ ಮಾತನಾಡಬಾರದು. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಮೊದಲು ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Key words: Priyank Kharge -statement – Former CM -BSY