ಮೈಸೂರು,ಫೆಬ್ರವರಿ,4,2021(www.justkannada.in): ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳೆದಿದ್ದ ವಕೀಲೆ ಮೀರಾ ರಾಘವೇಂದ್ರ ವಿರುದ್ದ ಮೈಸೂರಿನಲ್ಲಿ ಪ್ರಗತಿಪರರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಕರಣ ಕುರಿತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಪ್ರೊ. ಮಹೇಶ್ ಚಂದ್ರಗುರು, ಭಗವಾನ್ ಮುಖಕ್ಕೆ ಬಳಿದ ಮಸಿ ಸೋಪು ಹಾಕಿ ತೊಳೆಯಬಹುದು. ಆದರೆ ಮೀರಾ ರಾಘವೇಂದ್ರ ತಮ್ಮ ವ್ಯಕ್ತಿತ್ವಕ್ಕೆ ಬಳಿದುಕೊಂಡ ಮಸಿ ಎಂದಿಗೂ ಹೋಗೊದಿಲ್ಲ. ವಕೀಲೆಯಾಗಿ ನ್ಯಾಯಂಗ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದರು.
ನ್ಯಾಯಾಂಗ ವ್ಯವಸ್ಥೆಗೆ ಮಸಿ ಬಳೆದಿದ್ದಾರೆ – ಪ್ರೊ. ಅರವಿಂದ ಮಾಲಗತ್ತಿ…
ಹಾಗೆಯೇ ಈ ಕುರಿತು ಮಾತನಾಡಿರುವ ಪ್ರೊ. ಅರವಿಂದ ಮಾಲಗತ್ತಿ, ವಕೀಲೆ ಮೀರಾ ರಾಘವೇಂದ್ರ ನ್ಯಾಯಾಂಗ ವ್ಯವಸ್ಥೆಗೆ ಮಸಿ ಬಳೆದಿದ್ದಾರೆ. ನ್ಯಾಯದೇವತೆಯ ಮುಖಕ್ಕೆ ಮಸಿ ಬಳೆದಿದ್ದಾರೆ. ಇದೊಂದು ಅಮಾನವೀಯ ಕೃತ್ಯ. ಪ್ರಚಾರದ ಗೀಳಿನಿಂದಾಗಿ ಪ್ರಿಪ್ಲಾನ್ಡ್ ಮಾಡಿ ಭಗವಾನರ ಮುಖಕ್ಕೆ ಮಸಿ ಬಳಿದಿದ್ದಾರೆ. ಯಾವುದೇ ವಿಚಾರವಾದರೂ ನ್ಯಾಯಯುತವಾದ ದಾರಿಯಲ್ಲಿ ನಡೆಯಬೇಕು. ಆದ್ರೆ ಮೀರಾ ರಾಘವೇಂದ್ರ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ಆವರಣದಲ್ಲಿ ಅವಮಾನಕರವಾದ ಘಟನೆ ನಡೆದಿದೆ. ಪ್ರೊ. ಭಗವಾನ್ ಮುಖಕ್ಕೆ ಮಸಿ ಬಳೆದಿರುವುದು ಖಂಡನೀಯ. ಈ ಕೃತ್ಯವನ್ನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ವಕೀಲೆ ಮೀರಾ ರಾಘವೇಂದ್ರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಮೀರಾ ರಾಘವೇಂದ್ರ ಅವರ ವಕೀಲಿಕೆಗೆ ನಿರ್ಬಂಧ ಹೇರುವಂತೆ ಆಗ್ರಹ…
ಪ್ರೊ.ಕೆ.ಎಸ್ ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರಾ ರಾಘವೇಂದ್ರ ಅವರ ವಕೀಲಿಕೆಗೆ ನಿರ್ಬಂಧ ಹೇರುವಂತೆ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕನಕ ಯುವಸೇನೆ ಆಗ್ರಹಿಸಿದೆ.
ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದಿರುವುದು ಅಕ್ಷಮ್ಯ ಅಪರಾಧ, ವಕೀಲೆ ಮೀರಾ ರಾಘವೇಂದ್ರ ಕೋರ್ಟ್ ಆವರಣದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ನ್ಯಾಯದ ಪರ ಕೆಲಸ ಮಾಡುವವರಿಂದಲೇ ಇಂತಹ ಕೃತ್ಯ ಸರಿಯಲ್ಲ. ಪ್ರೊ. ಭಗವಾನ್ ವಯಸ್ಸಿಗಾದರೂ ಬೆಲೆ ಕೊಡಬೇಕಾಗಿತ್ತು. ಇದು ವಕೀಲ ವೃತ್ತಿಗೆ ಮಾಡಿದ ಅಪಮಾನ ಎಂದು ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಜಾಕಿರ್ ಹುಸೇನ್, ಪ್ರಧಾನ ಸಂಚಾಲಕ ಡೈರಿ ವೆಂಕಟೇಶ್, ಕರ್ನಾಟಕ ರಾಜ್ಯ ಕನಕ ಯುವಸೇನೆ ಮೈಸೂರು ಅಧ್ಯಕ್ಷರಾದ ಎ .ಹೆಚ್.ಕೃಷ್ಣೇಗೌಡ ಎಂದು ಹೇಳಿದ್ದಾರೆ.
Key words: Pro.Bhagavan-black ink- protest- against- Advocates- Meera Raghavendra-mysore