ಬೆಂಗಳೂರು,ಫೆ,21,2020(www.justkannada.in): ಅಮೂಲ್ಯ ವಿರುದ್ದ ಬೆಂಗಳೂರಿನ ಟೌನ್ ಹಾಲ್ ಬಳಿ ಕನ್ನಡ ಪರ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿ ಅರುದ್ರಾ ವಿರುದ್ದ ವಿಚಾರ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ನಿನ್ನೆ ಫ್ರೀಡಂಪಾರ್ಕ್ ಬಳಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ದ ಇಂದು ಟೌನ್ ಹಾಲ್ ಬಳಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮುಸಲ್ಮಾನ್, ದಲಿತ, ಕಾಶ್ಮೀರಿ, ಟ್ರಾನ್ಸ್, ಆದಿವಾಸಿ ಮುಕ್ತಿ ಮುಕ್ತಿ ಎಂಬ ಭಿತ್ತಿಪತ್ರ ಹಿಡಿದು ಅರುದ್ರಾ ಪಾಕ್ ಪರ ಘೋಷಣೆ ಕೂಗಿದ್ದು ಆಕೆಯನ್ನ ಎಸ್ ಜೆ ಪಾರ್ಕ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಅರುದ್ರಾ ವಿರುದ್ದ ಐಪಿಸಿ ಸೆಕ್ಷನ್ 153(ಎ) ಅಡಿ ಎಸ್.ಜೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು ಅಮೂಲ್ಯಗೂ ನನಗೂ ಯಾವುದೇ ರೀತಿ ಸ್ನೇಹವಿಲ್ಲ ಎಂದು ಪೊಲೀಸರ ಎದುರು ಅರುದ್ರಾ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.
Key words: Pro-Pak –case- town hall-FIR-registration -against -Arudra.